ಕೆಎನ್ಎನ್ಡಿಜಿಟಲ್ ಡೆಸ್ಕ್ : ಪೋರ್ಚುಗಲ್ ಗಡಿಯಲ್ಲಿರುವ ಸಾಲ್ಟೊ ಡಿ ಕ್ಯಾಸ್ಟ್ರೋ ಹೆಸರಿನ ಸಂಪೂರ್ಣ ಗ್ರಾಮವನ್ನ ವಾಯುವ್ಯ ಸ್ಪೇನ್ನ ಝಮೋರಾ ಪ್ರಾಂತ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಬೆಲೆಯನ್ನ ಎರಡು ಲಕ್ಷದ ಅರವತ್ತು ಸಾವಿರ ಯೂರೋ ಎಂದು ನಿಗದಿಪಡಿಸಲಾಗಿದೆ. ಭಾರತೀಯ ಕರೆನ್ಸಿ ಪ್ರಕಾರ, ಈ ಮೊತ್ತವು ಇಂದು ಸುಮಾರು ಎರಡೂವರೆ ಕೋಟಿ ರೂಪಾಯಿಗಳಿಗೆ ಸಮಾನವಾಗಿದೆ. ರಾಜಧಾನಿ ದೆಹಲಿಯ ಹಲವು ಸೊಸೈಟಿಗಳಲ್ಲಿ ಈ ಬೆಲೆಗೆ ಫ್ಲಾಟ್’ಗಳು ಲಭ್ಯವಿರುವುದು ಗಮನಾರ್ಹ. ವರದಿಯ ಪ್ರಕಾರ, ಈ ಗ್ರಾಮವನ್ನ ಸ್ಪೇನ್ನ ರಾಜಧಾನಿ ಮ್ಯಾಡ್ರಿಡ್ನಿಂದ ರಸ್ತೆಯ ಮೂಲಕ ಮೂರು ಗಂಟೆಗಳಲ್ಲಿ ತಲುಪಬಹುದು.
ವರದಿಯ ಪ್ರಕಾರ, ಸ್ಪೇನ್ನ ಸಣ್ಣ ಪಟ್ಟಣದಲ್ಲಿರುವ ಸಾಲ್ಟೊ ಡಿ ಕ್ಯಾಸ್ಟ್ರೋದಲ್ಲಿ ಅಂತಹ ಅನೇಕ ಕಟ್ಟಡಗಳಿವೆ. ಗ್ರಾಮದಲ್ಲಿ ಒಟ್ಟು 44 ಮನೆಗಳು, ಹೋಟೆಲ್, ಚರ್ಚ್, ಶಾಲೆ, ಪುರಸಭೆಯ ಈಜುಕೊಳ ಮತ್ತು ಸಿವಿಲ್ ಗಾರ್ಡ್ ಇರುವ ಬ್ಯಾರಕ್ ಕಟ್ಟಡವಿದೆ. ಈಗ ಈ ಗ್ರಾಮದಲ್ಲಿ ಯಾರೂ ವಾಸಿಸುತ್ತಿಲ್ಲ. ವರದಿಯ ಪ್ರಕಾರ, ಈ ಗ್ರಾಮವು ಮೂರು ದಶಕಗಳ ಹಿಂದೆ ನಿರ್ಜನವಾಗಿತ್ತು. 2000ರ ಆರಂಭದಲ್ಲಿ, ವ್ಯಕ್ತಿಯೊಬ್ಬರು ಈ ಗ್ರಾಮವನ್ನ ಖರೀದಿಸಿದ್ದರು. ಅವರು ಗ್ರಾಮವನ್ನ ಪ್ರವಾಸಿ ತಾಣವಾಗಿ ಪರಿವರ್ತಿಸುವ ಉದ್ದೇಶದಿಂದ ಖರೀದಿಸಿದ್ದರು, ಆದರೆ ಯೂರೋಜೋನ್ ಬಿಕ್ಕಟ್ಟು ಯೋಜನೆಯನ್ನು ವಿಫಲಗೊಳಿಸಿತು.
ಈ ವೆಬ್ಸೈಟ್ನಲ್ಲಿ ಹಳ್ಳಿ ಮಾರಾಟ ಮಾಡಲಾಗುತ್ತಿದೆ.!
ಗ್ರಾಮವನ್ನು ಖರೀದಿಸಿದವರು ಇಲ್ಲಿ ಹೋಟೆಲ್ ನಿರ್ಮಿಸುವ ಕನಸು ಕಂಡಿದ್ದರು. ಆದ್ರೆ, ಇದೆಲ್ಲವನ್ನು ನಿಲ್ಲಿಸಲಾಯಿತು ಎಂದು ರಾಯಲ್ ಇನ್ವೆಸ್ಟ್ ಕಂಪನಿಯ ಉದ್ಯೋಗಿ ರೋನಿ ರೋಡ್ರಿಗಸ್ ಮಾಹಿತಿ ನೀಡಿದರು. ಆ ವ್ಯಕ್ತಿ ಇನ್ನೂ ಇಲ್ಲಿ ಹೋಟೆಲ್ ನಿರ್ಮಿಸಲು ಇಷ್ಟಪಡುತ್ತಾರೆ ಎಂದು ರೋನಿ ಹೇಳಿದರು. www.idealista.com ವೆಬ್ಸೈಟ್ನಲ್ಲಿ ಗ್ರಾಮವನ್ನು ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಅದರ 80 ವರ್ಷದ ಮಾಲೀಕರು ವೆಬ್ಸೈಟ್ನಲ್ಲಿ, “ನಾನು ನಗರವಾಸಿ ಮತ್ತು ಹಳ್ಳಿಯನ್ನ ನಿರ್ವಹಿಸಲು ಸಾಧ್ಯವಿಲ್ಲದ ಕಾರಣ ನಾನು ಅದನ್ನ ಮಾರಾಟ ಮಾಡುತ್ತಿದ್ದೇನೆ” ಎಂದರು.
ಇದೇ 28 ರಿಂದ ‘ಶುಭ ಮುಹೂರ್ತ’ ಆರಂಭ ; ಯಾವ ತಿಂಗಳಲ್ಲಿ ಎಷ್ಟಿವೆ.? ಇಲ್ಲಿದೆ ಮಾಹಿತಿ