ನವದೆಹಲಿ: ಸಾಲ ನೀಡೋದಕ್ಕಾಗಿ ಇದೀಗ ತರಾವರಿ ಆಪ್ ಗಳು ಬಂದಿದ್ದಾವೆ. ಅನೇಕರು ಈಗಾಗಲೇ ಆ ಆ್ಯಪ್ ಗಳ ಮೂಲಕ ಸಾಲ ಕೂಡ ಪಡೆದಿರಬಹುದು. ಇನ್ನು ಕೆಲವರು ಸಾಲ ಪಡೆಯೋ ನಿರೀಕ್ಷೆಯಲ್ಲೂ ಇರಬಹುದು. ಆದ್ರೇ.. ಅದಕ್ಕೂ ಮೊದಲು ಎಚ್ಚರಿಕೆಯಾಗಿ ಮುಂದೆ ಸುದ್ದಿ ಓದಿ..
ಮೊಬೈಲ್ ಆಪ್ ನಲ್ಲಿ ಮೂಲಕ ಸಾಲ ನೀಡಿದ್ದಲ್ಲದೇ, ಸಾಲಪಡೆದವರ ಖಾಸಗಿ ಚಿತ್ರಗಳನ್ನು ಸಂಗ್ರಹಿಸಿ, ಹಣ ಸುಲಿಗೆ ಮಾಡಲಾಗುತ್ತಿದೆ. ಇದೀಗ ಹೀಗೆ ಸಾಲ ಪಡೆದವರಿಂದ ಹಣ ಸುಲಿಗೆ ಮಾಡುತ್ತಿದ್ದಂತ ಚೀನಿ ಆಪ್ ಗ್ಯಾಂಗ್ ಅನ್ನು ಇದೀಗ ಪೊಲೀಸರು ಬಂಧಿಸಿರೋ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಅಂದಹಾಗೇ ಕಳೆದ 2 ತಿಂಗಳಲ್ಲಿ ಈ ಚೀನಿ ಆಪ್ ಗ್ಯಾಂಗ್ ಸಾವಿರಾರು ಜನರಿಂದ 500 ಕೋಟಿ ರೂ ಹಣ ಸುಲಿಗೆ ಮಾಡಿ, ಚೀನಾಕ್ಕೆ ರವಾನಿಸಿದೆಯಂತೆ. ಈ ಸಂಬಂಧ 22 ವಂಚಕರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಉತ್ತರ ಪ್ರದೇಶದ ಲಖನೌದಲ್ಲಿ ಕಾಲ್ ಸೆಂಟರ್ ಆರಂಭಿಸಿ, ದೆಹಲಿ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸಾಲ ಪಡೆದವರ ಖಾಸಗಿ ಚಿತ್ರಗಳನ್ನು ತೋರಿಸಿ, ಹಣವನ್ನು ಸುಲಿಗೆ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ.
BIGG NEWS : ವೀರ ಸಾವರ್ಕರ್ ಕುರಿತು ಮಾತನಾಡುವುದು ಕಾಂಗ್ರೆಸ್ ನಾಯಕರ ದೌರ್ಬಲ್ಯ : ಸಚಿವ ಸುಧಾಕರ್ ವಾಗ್ದಾಳಿ