ಕೆಎನ್ಎನ್ ಡಿಜಿಟಲ್ ಡೆಸ್ಕ್: ಅನೇಕರ ಅನಾರೋಗ್ಯಕ್ಕೆ ಇತ್ತೀಚಿಗೆ ಕಾರಣವಾಗುತ್ತಿರೋ ರೋಗವೆಂದ್ರೇ ಅದು ಆಮ್ಲಪಿತ್ತ / ಉಳಿ ಅಥವಾ ಕಹಿ ತೇಗು(Hyperacidity). ಈ ರೋಗದ ಸಮಸ್ಯೆಯ ನಿವಾರಣೆಗೆ ಕೆಲವರು ಇಂಗ್ಲೀಷ್ ಮೆಡಿಸಿನ್ ಮೊರೆ ಹೋದ್ರೆ, ಮತ್ತೆ ಕೆಲವರು ಆಯುರ್ವೇದ ಔಷಧದ ( Ayurvedic Remedies ) ಮೊರೆ ಹೋಗುತ್ತಾರೆ. ಆದ್ರೇ ಇವರೆಡೂ ಬಿಟ್ಟು ಜಸ್ಟ್ ಈ ಮನೆ ಮದ್ದು ( Home Medicine ) ಮಾಡಿ ಸೇವಿಸಿ ನೋಡಿ, ನಿಮ್ಮ ಆಮ್ಲಪಿತ್ತ, ಉಳಿ-ಕಹಿ ತೇಗಿನ ಸಮಸ್ಯೆ ನಿವಾರಣೆ ಎನ್ನುತ್ತಾರೆ ವೈದ್ಯ ಡಾ. ಪ್ರವೀಣ್ ಕುಮಾರ್. ಹಾಗಾದ್ರೇ ಆ ಬಗ್ಗೆ ಮುಂದೆ ಓದಿ.
ಇತ್ತೀಚಿನ ದಿನಗಳಲ್ಲಿ ಆಮ್ಲಪಿತ್ತ ರೋಗವು ಎಲ್ಲ ವರ್ಗದ ಜನರಿಗೆ ಮತ್ತು ಎಲ್ಲ ವಯಸ್ಸಿನವರಿಗೂ ಕಾಡುತ್ತಿದೆ ಇದಕ್ಕೆ ನಮ್ಮ ಕೆಟ್ಟ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿಯೇ ಕಾರಣ.
ಆಮ್ಲಪಿತ್ತವು ಒಂದು ಅನ್ನವಹ ಸ್ರೋತಸ್ಸಿನ ( Gastrointestinal Tract) ರೋಗ. ಪಿತ್ತವನ್ನು ಪ್ರಕೋಪ ಮಾಡುವಂತಹ ಪದಾರ್ಥಗಳನ್ನು ತಿಂದಾಗ ಪಾಚಕ ಪಿತ್ತದಲ್ಲಿ ಆಮ್ಲದ ಭಾವವು ಹೆಚ್ಚಾಗುವುದರಿಂದ ಆಮ್ಲಪಿತ್ತವು ಉಂಟಾಗುತ್ತದೆ. ಇದನ್ನು ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ Acid reflux, Hyperacidity & Acid peptic disease ಅಂತಲೂ ಕರೆಯುತ್ತಾರೆ.
ಆಮ್ಲಪಿತ್ತವನ್ನು ಉರ್ದ್ವಗ ಆಮ್ಲಪಿತ್ತ ಮತ್ತು ಅಧೋಗ ಆಮ್ಲಪಿತ್ತ ಎಂದು ಎರಡು ವಿಧವಾಗಿ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಆಮ್ಲಪಿತ್ತ ಬರಲು ಮುಖ್ಯ ಕಾರಣಗಳು
- ಅಳಸಿದ / ಕೆಟ್ಟು ಹೋದ ಪದಾರ್ಥಗಳನ್ನು ತಿನ್ನುವುದು
- ಅತಿಯಾದ ಹುಳಿ/ ಖಾರದ ಆಹಾರ ಸೇವನೆ
- ಕರಿದ ಪದಾರ್ಥಗಳ ಸೇವನೆ
- ವಿರುದ್ಧ ಆಹಾರ ಸೇವನೆ
ಇದರಿಂದ ದೇಹದಲ್ಲಿನ ಪಿತ್ತ/ ಉಷ್ಣತೆಯು ಏರಿಕೆಯಾಗುತ್ತದೆ. ಆದ ಕಾರಣ ಆಮ್ಲಪಿತ್ತ / ಉಳಿ ಅಥವಾ ಕಹಿ ತೇಗು ಅಂತಹ ಲಕ್ಷಣಗಳು ಕಾಣಿಸುತ್ತದೆ.
ಆಮ್ಲಪಿತ್ತದ ಲಕ್ಷಣಗಳು
- ಅನ್ನ ಜೀರ್ಣವಾಗದಿರುವುದು
- ಉಳಿ / ಕಹಿ ತೇಗುನಂತೆ ಬರುವುದು
- ವಾಂತಿ / ವಾಕರಿಕೆ
- ಮೈ ಭಾರ
- ಎದೆ ಮತ್ತು ಗಂಟಲಿನಲ್ಲಿ ಉರಿ
- ಆಯಾಸ
- ಅರುಚಿ
ಜಸ್ ಈ ಮನೆಮದ್ದು ಮಾಡಿ, ಸೇವಿಸಿ ನೋಡಿ
- 1/2 ಚಮಚ ಕೊತ್ತಂಬರಿ ಕಾಳನ್ನು ನೆನಸಿದ ನೀರಿನಲ್ಲಿ ಸ್ವಲ್ಪ ಕಲ್ಲು ಸಕ್ಕರೆ ಬೆರೆಸಿ ಸೇವಿಸುವುದು
- ಊಟ ಮುಗಿದ ನಂತರ ಕಾಲು ಚಮಚ ಜೀರಿಗೆಯನ್ನು ಸೇವಿಸುವುದು
- ಅರ್ಧ ಚಮಚ ಜೇಷ್ಠ ಮಧು ಅಥವಾ ನೆಲ್ಲಿಕಾಯಿ ಪುಡಿವನ್ನು ನೀರಿನಲ್ಲಿ ಕಲಸಿ ಸೇವಿಸುವುದು
ಆದ್ರೇ ನೆನಪಿರಲಿ, ನಿಮ್ಮ ಸಮಸ್ಯೆ ಇದಕ್ಕಿಂತ ಹೆಚ್ಚಾಗಿದ್ದರೇ ಸಮೀಪದ ವೈದ್ಯರ ಬಳಿ ತೆರಳಿ ಸೂಕ್ತ ಸಲಹೆಯ ಮೂಲಕ ಚಿಕಿತ್ಸೆ ಪಡೆಯೋದು ಮರೆಯಬೇಡಿ.
ಈ ಮನೆ ಮದ್ದು, ನಿಮ್ಮ ಹಲವು ಸಮಸ್ಯೆ ನಿವಾರಣೆಗಾಗಿ ಡಾ. ಪ್ರವೀಣ್ ಕುಮಾರ್, ಬಿ.ಎ.ಎಂ.ಎಸ್, 8660885793 ( ವಾಟ್ಸಾಪ್ ಮಾತ್ರ ಮಾಡುವುದು) ಸಂಖ್ಯೆಗೆ ಸಂಪರ್ಕಿಸಿಯೂ ಪಡೆಯಬಹುದಾಗಿದೆ.