Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾತ್ರೆ ಬೇಡ, ಕೆಮಿಕಲ್ ಬೇಡ; ಲೈಂಗಿಕ ಸಾಮರ್ಥ್ಯ ಮತ್ತು ಸ್ಟ್ಯಾಮಿನಾ ಹೆಚ್ಚಿಸಬಲ್ಲ ಸೂಪರ್ ಫುಡ್ಸ್ ಇವು! | Sexual Stamina

ದಿನವೂ ಧರಿಸುವ ನೈಟಿ, ಲುಂಗಿಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು? ಇಲ್ಲಿದೆ ಆರೋಗ್ಯದ ರಹಸ್ಯ!

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `SSLC’ ಪಾಸಾಗಿ ಮನೇಲಿದ್ದೀರಾ? `ಪೋಸ್ಟ್ ಆಫೀಸ್ ಫ್ರಾಂಚೈಸಿ’ ಓಪನ್ ಮಾಡಿ ತಿಂಗಳಿಗೆ ₹80,000 ಆದಾಯ ಗಳಿಸಿ !
KARNATAKA

`SSLC’ ಪಾಸಾಗಿ ಮನೇಲಿದ್ದೀರಾ? `ಪೋಸ್ಟ್ ಆಫೀಸ್ ಫ್ರಾಂಚೈಸಿ’ ಓಪನ್ ಮಾಡಿ ತಿಂಗಳಿಗೆ ₹80,000 ಆದಾಯ ಗಳಿಸಿ !

By kannadanewsnow57

ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಚಿಂತಿಸುತ್ತಿರುವ ಯುವಕ-ಯುವತಿಯರಿಗೆ ಹಾಗೂ ಸಣ್ಣ ಉದ್ಯಮಿಗಳಿಗೆ ಭಾರತೀಯ ಅಂಚೆ ಇಲಾಖೆಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ನಿರುದ್ಯೋಗಿಗಳಿಗೆ ಆಸರೆಯಾಗಲು ಮತ್ತು ದೇಶದ ಮೂಲೆ ಮೂಲೆಗೂ ತನ್ನ ಸೇವೆಗಳನ್ನು ವಿಸ್ತರಿಸುವ ಉದ್ದೇಶದಿಂದ ಅಂಚೆ ಇಲಾಖೆಯು ‘ಪೋಸ್ಟ್ ಆಫೀಸ್ ಫ್ರಾಂಚೈಸಿ 2.0’ (Post Office Franchise 2.0) ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಜನವರಿ 1, 2026 ರಿಂದಲೇ ಈ ಹೊಸ ಯೋಜನೆ ಜಾರಿಗೆ ಬಂದಿದ್ದು, ಅತ್ಯಂತ ಕಡಿಮೆ ಬಂಡವಾಳದಲ್ಲಿ ನಿಮ್ಮದೇ ಸ್ವಂತ ಅಂಚೆ ಕಚೇರಿಯನ್ನು ಆರಂಭಿಸಿ ತಿಂಗಳಿಗೆ ಸಾವಿರಾರು ರೂಪಾಯಿಗಳವರೆಗೆ ಭರ್ಜರಿ ಆದಾಯ ಗಳಿಸುವ ಅದ್ಭುತ ಅವಕಾಶ ಇದಾಗಿದೆ.

ಏನಿದು ಫ್ರಾಂಚೈಸಿ 2.0 ಯೋಜನೆ?

ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಮತ್ತು ‘ಡಿಜಿಟಲ್ ಇಂಡಿಯಾ’ ಅಭಿಯಾನಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಈ ಯೋಜನೆಯನ್ನು ತರಲಾಗಿದೆ. ಅಂಚೆ ಸೇವೆಗಳು ಸಮರ್ಪಕವಾಗಿ ತಲುಪದ ಹೊಸ ನಗರ ಪ್ರದೇಶಗಳು, ದೊಡ್ಡ ಟೌನ್ಶಿಪ್ಗಳು, ಕೈಗಾರಿಕಾ ವಲಯಗಳು ಮತ್ತು ಶೈಕ್ಷಣಿಕ ಕ್ಯಾಂಪಸ್ಗಳಲ್ಲಿ ಈ ಫ್ರಾಂಚೈಸಿಗಳನ್ನು ಆರಂಭಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ ಕೇವಲ ಹಳೆಯ ಪದ್ಧತಿಯ ಸೇವೆಗಳಷ್ಟೇ ಅಲ್ಲದೆ, ಲೇಟೆಸ್ಟ್ ತಂತ್ರಜ್ಞಾನ (APT 2.0) ಬಳಸಲಾಗುತ್ತಿದ್ದು, ಡಿಜಿಟಲ್ ಪಾವತಿ, ರಿಯಲ್ ಟೈಮ್ ಟ್ರ್ಯಾಕಿಂಗ್ ಹಾಗೂ ಸ್ಮಾರ್ಟ್ ಲಾಕರ್ನಂತಹ ಆಧುನಿಕ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಬಹುದಾಗಿದೆ.

ಅರ್ಹತೆಗಳು ಏನೇನು?

ಕನಿಷ್ಠ 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

ಕಂಪ್ಯೂಟರ್ ಬಳಕೆಯ ಜ್ಞಾನವಿರಬೇಕು ಮತ್ತು ಸ್ಥಳೀಯ ಭಾಷೆಯ (ಕನ್ನಡದ) ಮೇಲೆ ಉತ್ತಮ ಹಿಡಿತವಿರಬೇಕು.

ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಈ ಯೋಜನೆಗೆ ಯಾವುದೇ ಗರಿಷ್ಠ ವಯೋಮಿತಿ ಇಲ್ಲ.

ಜನ ಓಡಾಡುವ ಜಾಗದಲ್ಲಿ ಸ್ವಂತ ಅಥವಾ ಬಾಡಿಗೆಯ ಸಣ್ಣ ಮಳಿಗೆ (ಆಫೀಸ್) ಇರಬೇಕು. ಹಾಲಿ ಕಿರಾಣಿ ಅಂಗಡಿ ಅಥವಾ ಟೀ ಶಾಪ್ ನಡೆಸುವವರೂ ಸಹ ಇದಕ್ಕೆ ಅರ್ಜಿ ಸಲ್ಲಿಸಬಹುದು.

ಕಚೇರಿಯಲ್ಲಿ ಕಡ್ಡಾಯವಾಗಿ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್, ಇಂಟರ್ನೆಟ್ ಸಂಪರ್ಕ, ಪಾರ್ಸೆಲ್ ತೂಕ ಮಾಡುವ ಯಂತ್ರ, ಬಾರ್ಕೋಡ್ ಸ್ಕ್ಯಾನರ್ ಮತ್ತು ಪ್ರಿಂಟರ್ ಇರಬೇಕು.

ಬಂಡವಾಳ ಮತ್ತು ನಿರೀಕ್ಷಿತ ಆದಾಯ:

ಭದ್ರತಾ ಠೇವಣಿ: ಜಾಗ ಮತ್ತು ಒಪ್ಪಂದದ ಆಧಾರದ ಮೇಲೆ ₹5,000 ದಿಂದ ₹10,000 ದವರೆಗೆ ಭದ್ರತಾ ಠೇವಣಿ (ಮರುಪಾವತಿಯಾಗುವ) ಇಡಬೇಕಾಗುತ್ತದೆ.

ಒಟ್ಟು ಬಂಡವಾಳ: ಆಫೀಸ್ ಉಪಕರಣಗಳು (ಫರ್ನಿಚರ್, ಕಂಪ್ಯೂಟರ್ ಇತ್ಯಾದಿ) ಖರೀದಿಸಲು ಅಂದಾಜು 1 ಲಕ್ಷದಿಂದ 1.5 ಲಕ್ಷ ರೂಪಾಯಿಗಳವರೆಗೆ ಖರ್ಚಾಗಬಹುದು.

ಆದಾಯ: ನೀವು ಮಾಡುವ ಕೆಲಸದ ವೇಗ ಹಾಗೂ ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ ತಿಂಗಳಿಗೆ ₹20,000 ದಿಂದ ₹80,000 ಕ್ಕೂ ಹೆಚ್ಚು ಆದಾಯ ಗಳಿಸುವ ಅವಕಾಶವಿದೆ.

ಕಮಿಷನ್ ದರ: ಪ್ರತಿ ರಿಜಿಸ್ಟರ್ಡ್ ಪೋಸ್ಟ್ ಮೇಲೆ ₹3 ಹಾಗೂ ₹200 ಕ್ಕಿಂತ ಹೆಚ್ಚಿನ ಮೌಲ್ಯದ ಮನಿ ಆರ್ಡರ್ ಮೇಲೆ ₹5 ಕಮಿಷನ್ ಸಿಗುತ್ತದೆ. ಸ್ಟ್ಯಾಂಪ್ ಮತ್ತು ಸ್ಟೇಷನರಿ ವಸ್ತುಗಳ ಮಾರಾಟದ ಮೇಲೆ ಶೇ. 5ರಷ್ಟು ಲಾಭ ಸಿಗಲಿದೆ.

ಯಾವೆಲ್ಲಾ ಸೇವೆಗಳನ್ನು ನೀಡಬಹುದು?
ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್, ಅಂಚೆ ಚೀಟಿಗಳು (ಸ್ಟ್ಯಾಂಪ್) ಮತ್ತು ಸ್ಟೇಷನರಿ ಮಾರಾಟ, ಅಂತರರಾಷ್ಟ್ರೀಯ ಪಾರ್ಸೆಲ್ ಸೇವೆ, ಕ್ಯಾಶ್ ಆನ್ ಡೆಲಿವರಿ (COD), ಮತ್ತು ಇತ್ತೀಚಿನ ಆನ್ಲೈನ್ ಶಾಪಿಂಗ್ ಟ್ರೆಂಡ್ಗೆ ತಕ್ಕಂತೆ ಇ-ಕಾಮರ್ಸ್ ಪಾರ್ಸೆಲ್ ಪಿಕ್-ಅಪ್ ಹಾಗೂ ಡೆಲಿವರಿ ಸೇವೆಗಳನ್ನು ಒದಗಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

ವಯಸ್ಸಿನ ದೃಢೀಕರಣಕ್ಕಾಗಿ ಜನನ ಪ್ರಮಾಣಪತ್ರ (Birth Certificate) ಅಥವಾ ಶಾಲಾ ವರ್ಗಾವಣೆ ಪತ್ರ (TC).

ಅಧಿಕೃತ ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕಡ್ಡಾಯ.

ಮನೆ ಮತ್ತು ಆಫೀಸ್ನ ವಿಳಾಸ ದೃಢೀಕರಣ ಪತ್ರಗಳು (Address Proof).

10ನೇ ತರಗತಿಯ ಅಂಕಪಟ್ಟಿ (Marks Card).

ಮಳಿಗೆಯ ಮಾಲೀಕತ್ವದ ಪತ್ರ ಅಥವಾ ಬಾಡಿಗೆ ಒಪ್ಪಂದದ ಪ್ರತಿ (Rental Agreement).

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?
ಆಸಕ್ತರು ಇಂಡಿಯಾ ಪೋಸ್ಟ್ನ ಅಧಿಕೃತ ವೆಬ್ಸೈಟ್ (indiapost.gov.in) ಗೆ ಭೇಟಿ ನೀಡಿ ‘ಫಾರ್ಮ್-ಎ’ (Form A) ಡೌನ್ಲೋಡ್ ಮಾಡಿಕೊಳ್ಳಬೇಕು. ಆನ್ಲೈನ್ನಲ್ಲಿ ಕಷ್ಟವಾದರೆ, ನೇರವಾಗಿ ಹತ್ತಿರದ ವಿಭಾಗೀಯ ಅಂಚೆ ಕಚೇರಿಗೆ (Divisional Post Office) ಭೇಟಿ ನೀಡಿ ಅರ್ಜಿಯನ್ನು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಮ್ಮ ‘ಬಿಸಿನೆಸ್ ಪ್ಲಾನ್’ ಮತ್ತು ಮೇಲೆ ತಿಳಿಸಿದ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ 14 ದಿನಗಳ ಒಳಗೆ ಅಧಿಕಾರಿಗಳು ನೀವು ತಿಳಿಸಿದ ಮಳಿಗೆಯ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ ಇಲಾಖೆಯೊಂದಿಗೆ ನೀವು ಅಧಿಕೃತ ಒಪ್ಪಂದಕ್ಕೆ (Agreement) ಸಹಿ ಮಾಡಿಕೊಳ್ಳಬಹುದು. ಸರ್ಕಾರಿ ಇಲಾಖೆಯೊಂದಿಗೆ ಕೈಜೋಡಿಸಿ ಸುರಕ್ಷಿತವಾದ ಸ್ವಂತ ಉದ್ಯೋಗ ಪ್ರಾರಂಭಿಸುವ ಕನಸು ಕಾಣುತ್ತಿರುವವರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ.

Are you a `SSLC' pass student? Open a `Post Office Franchise' and earn ₹80000 per month!
Share. Facebook Twitter LinkedIn WhatsApp Email

Related Posts

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

1 Min Read

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

2 Mins Read

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

2 Mins Read
Recent News

ಮಾತ್ರೆ ಬೇಡ, ಕೆಮಿಕಲ್ ಬೇಡ; ಲೈಂಗಿಕ ಸಾಮರ್ಥ್ಯ ಮತ್ತು ಸ್ಟ್ಯಾಮಿನಾ ಹೆಚ್ಚಿಸಬಲ್ಲ ಸೂಪರ್ ಫುಡ್ಸ್ ಇವು! | Sexual Stamina

ದಿನವೂ ಧರಿಸುವ ನೈಟಿ, ಲುಂಗಿಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು? ಇಲ್ಲಿದೆ ಆರೋಗ್ಯದ ರಹಸ್ಯ!

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

‘ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಇಲ್ಲ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು!’: ಸುಪ್ರೀಂ ಕೋರ್ಟ್

State News
KARNATAKA

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಲಿಂಡರ್‌ಗಾಗಿ ಸಾರ್ವಜನಿಕರು…

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

ಜೂನ್.1ರಂದು ಶಿವಮೊಗ್ಗದಲ್ಲಿ ಸಿಎಂ ಸಿದ್ಧರಾಮಯ್ಯ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳ ಶಂಕುಸ್ಥಾಪನೆ; ಸಚಿವ ಮಧು ಬಂಗಾರಪ್ಪ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.