ಬೆಂಗಳೂರು : ಹಿಂದುತ್ವದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರ ನನಗೇನು ಅಚ್ಚರಿ ತಂದಿಲ್ಲ, ಅದು ಪಕ್ಷದ ಸಿದ್ದಾಂತದ ಒಂದು ಅವಿಭಾಜ್ಯ ಅಂಗವಾಗಿದೆ ಎಂದರು.
ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವರು ‘ ಕಾಂಗ್ರೆಸ್ ನಾಯಕರಿಗೆ ಹಿಂದೂ ಪದವೆಂದರೆ ಅಶ್ಲೀಲ ಹಾಗೂ ಅದೇ ರೀತಿಯಲ್ಲಿ ಕೇಸರಿ ಎಂದರೆ ಅಲರ್ಜಿ, ಈ ನಿಲುವು ಆ ಪಕ್ಷದ ಸಿದ್ದಾಂತದ ಒಂದು ಅವಿಭಾಜ್ಯ ಅಂಗವಾಗಿದೆ ಎಂದರು.
ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ನನಗೇನು ಅಚ್ಚರಿಯಾಗಿಲ್ಲ, ಅವರು ತಮ್ಮ ಪಕ್ಷದ ಧೋರಣೆಯನ್ನು ಧ್ವನಿಸಿದ್ದಾರೆ , ಕಾಂಗ್ರೆಸ್ ನ ಹಿಂದೂ ವಿರೋಧಿ ನಡೆಯಿಂದ ರಾಜ್ಯದಲ್ಲಿ ಹಲವು ಘಟನೆಗಳು ನಡೆಯುತ್ತಿದೆ ಎಂದರು.
ಕೋವಿಡ್ನಿಂದ ಚೇತರಿಸಿಕೊಂಡವರಿಗೆ ಬಿಗ್ ಶಾಕಿಂಗ್ ನ್ಯೂಸ್: ಒಂದು ವರ್ಷದವರೆಗೆ ಕಾಡಲಿದೆಯಂತೆ ಈ ಎಲ್ಲಾ ಸಮಸ್ಯೆ