ಬೆಂಗಳೂರು: ರೌಡಿಗಳಿಗೆ ಬಿಜೆಪಿ ರಾಜಮರ್ಯಾದೆ ಕೊಡುತ್ತಿರುವಾಗ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಬಿಲ್ಡರ್ ಮೇಲೆ ಗುಂಡಿನ ದಾಳಿಯಾಗಿದೆ. ಸರ್ಕಾರದ ಬೆಂಬಲವಿದೆ ಎಂದು ತಿಳಿದಿದ್ದೇ ತಡ ಭೂಗತಲೋಕ ಮತ್ತೆ ಆಕ್ಟಿವ್ ಆಗಿದೆ ಅರಗ ಜ್ಞಾನೇಂದ್ರ ಅವರೇ, ಭುಗತಲೋಕಕ್ಕೆ ಧೈರ್ಯ ಬಂದಿದ್ದು ನಿಮ್ಮಿಂದಲೇ ಅಲ್ಲವೇ? ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿಯಲ್ಲವೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ರೌಡಿಗಳಿಗೆ ಬಿಜೆಪಿ ರಾಜಮರ್ಯಾದೆ ಕೊಡುತ್ತಿರುವಾಗ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಬಿಲ್ಡರ್ ಮೇಲೆ ಗುಂಡಿನ ದಾಳಿಯಾಗಿದೆ.
ಸರ್ಕಾರದ ಬೆಂಬಲವಿದೆ ಎಂದು ತಿಳಿದಿದ್ದೇ ತಡ ಭೂಗತಲೋಕ ಮತ್ತೆ ಆಕ್ಟಿವ್ ಆಗಿದೆ@JnanendraAraga ಅವರೇ, ಭುಗತಲೋಕಕ್ಕೆ ಧೈರ್ಯ ಬಂದಿದ್ದು ನಿಮ್ಮಿಂದಲೇ ಅಲ್ಲವೇ? ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿಯಲ್ಲವೇ?
— Karnataka Congress (@INCKarnataka) December 9, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ಬಿಜೆಪಿ ರೌಡಿಗಳಿಗೆ ಮಣೆ ಹಾಕುತ್ತಿರುವುದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿಯುತ್ತಿದೆ. ಇದಕ್ಕೆ ಬೆಂಗಳೂರಿನ ಶೂಟೌಟ್ ಘಟನೆಯೇ ಸಾಕ್ಷಿ. ಬಿಜೆಪಿಯಲ್ಲಿ ಸ್ಥಾನ ಪಡೆದುಕೊಳ್ಳಲು ರೌಡಿಗಳು ತಮ್ಮ ಕ್ರೈಮ್ ಸ್ಕೊರ್ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ, ಬಿಜೆಪಿಯ ರೌಡಿ ಮೋರ್ಚಾಗೆ ಕ್ರೈಮ್ ಸ್ಕೊರ್ ಮುಖ್ಯ ಅಲ್ಲವೇ ಎಂದಿದೆ.
ಬಿಜೆಪಿ ರೌಡಿಗಳಿಗೆ ಮಣೆ ಹಾಕುತ್ತಿರುವುದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿಯುತ್ತಿದೆ.
ಇದಕ್ಕೆ ಬೆಂಗಳೂರಿನ ಶೂಟೌಟ್ ಘಟನೆಯೇ ಸಾಕ್ಷಿ.ಬಿಜೆಪಿಯಲ್ಲಿ ಸ್ಥಾನ ಪಡೆದುಕೊಳ್ಳಲು ರೌಡಿಗಳು ತಮ್ಮ ಕ್ರೈಮ್ ಸ್ಕೊರ್ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ,
ಬಿಜೆಪಿಯ ರೌಡಿ ಮೋರ್ಚಾಗೆ ಕ್ರೈಮ್ ಸ್ಕೊರ್ ಮುಖ್ಯ ಅಲ್ಲವೇ!
— Karnataka Congress (@INCKarnataka) December 9, 2022
ಚಿಲುಮೆಯ ಕೈಚಳಕದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 1.30 ಲಕ್ಷ ನಕಲಿ ಮತದಾರರ ಹೆಸರು ಸೇರಿಸಿ, 90 ಸಾವಿರ ಅಸಲಿ ಮತದಾರರ ಹೆಸರು ತೆಗೆಸಲಾಗಿದೆ. ಜನಾಕ್ರೋಶ ಎದುರಿಸುತ್ತಿದ್ದರೂ ಇಂತಹ ಅಕ್ರಮಗಳನ್ನು ನಡೆಸಿಯೇ ಗೆದ್ದುಬಿಟ್ಟೆವು ಎಂದು ಬೀಗುತ್ತದೆ ಬಿಜೆಪಿ. ಈ ಅಕ್ರಮವನ್ನು ಉನ್ನತ ತನಿಖೆಗೆ ವಹಿಸದ ಹೊರತು ಜನತೆಗೆ ನ್ಯಾಯ ಸಿಗುವುದಿಲ್ಲ ಎಂದು ವಾಗ್ಧಾಳಿ ನಡೆಸಿದೆ.
ಚಿಲುಮೆಯ ಕೈಚಳಕದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 1.30 ಲಕ್ಷ ನಕಲಿ ಮತದಾರರ ಹೆಸರು ಸೇರಿಸಿ, 90 ಸಾವಿರ ಅಸಲಿ ಮತದಾರರ ಹೆಸರು ತೆಗೆಸಲಾಗಿದೆ.
ಜನಾಕ್ರೋಶ ಎದುರಿಸುತ್ತಿದ್ದರೂ ಇಂತಹ ಅಕ್ರಮಗಳನ್ನು ನಡೆಸಿಯೇ ಗೆದ್ದುಬಿಟ್ಟೆವು ಎಂದು ಬೀಗುತ್ತದೆ ಬಿಜೆಪಿ.
ಈ ಅಕ್ರಮವನ್ನು ಉನ್ನತ ತನಿಖೆಗೆ ವಹಿಸದ ಹೊರತು ಜನತೆಗೆ ನ್ಯಾಯ ಸಿಗುವುದಿಲ್ಲ. pic.twitter.com/r7EHiRbWqn
— Karnataka Congress (@INCKarnataka) December 8, 2022