ಬೆಂಗಳೂರು: ಇಂದು ರಾಜ್ಯಾದ್ಯಂತ ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಗಂಧದ ಗುಡಿ’ (Gandhada Gudi) ಚಿತ್ರ ಬಿಡುಗಡೆಯಾಗಿದೆ.
BIGG NEWS: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ ಬಿಗ್ ಟ್ವಿಸ್ಟ್; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ
ಈಗಾಗಲೇ ಬೆಂಗಳೂರಿನ ಥಿಯೇಟರ್ಗಳಲ್ಲಿ ಫಸ್ಟ್ ಶೋ ಆರಂಭವಾಗಿದೆ.ಇತ್ತ, ಮೈಸೂರು ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪುನೀತ್ ರಾಜ್ ಕುಮಾರ್ ಪಡೆದು , ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಂಧದ ಗುಡಿ ಚಿತ್ರತಂಡ ಜೊತೆಗೆ ಮೈಸೂರು ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
BIGG NEWS: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ ಬಿಗ್ ಟ್ವಿಸ್ಟ್; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ
ಇನ್ನು ಇಂದು ಪುನೀತ್ ರಾಜ್ಕುಮಾರ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಎಲ್ಲರೂ ಗಂಧದ ಗುಡಿ ಸಾಕ್ಷ್ಯಾಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಎಲ್ಲಾ ಥಿಯೇಟರ್ಗಳ ಎದುರು ಪುನೀತ್ ರಾಜ್ಕುಮಾರ್ ಅವರ ಕಟೌಟ್ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳು ಅವುಗಳಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದಾರೆ.ದೊಡ್ಡ ಪರದೆ ಮೇಲೆ ಪುನೀತ್ ರಾಜ್ಕುಮಾರ್ ಅವರನ್ನು ನೋಡಲು ಸಿಕ್ಕಿರುವ ಕೊನೆಯ ಅವಕಾಶ ಇದು. ಕರ್ನಾಟಕದ 225ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಾಕ್ಷ್ಯಚಿತ್ರ ಬಿಡುಗಡೆ ಆಗಿದೆ. ಗುರುವಾರವೇ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಆಯೋಜನೆಗೊಂಡಿತ್ತು. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಡಾಕ್ಯುಮೆಂಟರಿ ನೋಡಿ ಎಮೋಷನಲ್ ಆಗುತ್ತಿದ್ದಾರೆ.