ಬಾಗಲಕೋಟೆ: ಯುವಜನ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನ ಯೋಜನೆ ಅಡಿಯಲ್ಲಿ ಯುವ ಪರಿವರ್ತಕರ ತರಬೇತಿಗಾಗಿ ಅರ್ಹ ಯುವಕ ಮತ್ತು ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಸಪ್ಟೆಂಬರ್ 22 ರೊಳಗಾಗಿ ತಮ್ಮ ಭಾವ ಚಿತ್ರವಿರುವ ಸ್ವವಿವರಗಳೊಂದಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕಚೇರಿ, ವೆಬ್ ಸೈಟ್ (yuvaspandana.bagalkot@gmail.com) ಮೂಲಕ ತಪಿಸಬಹುದಾಗಿರುತ್ತದೆ. ಅಥವಾ ಸದರಿ ದಿನಾಂಕದಂದು ಬೆಳಿಗ್ಗೆ 11 ಗಂಟೆಗೆ ನೇರಸಂದರ್ಶನಕ್ಕೆ ಹಾಜರಾಗಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂ ಸಂ:9845220920, 9008343253 ಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.