ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಲಿ ಇರುವಂತ ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಯ ( Community Health Officer Recruitment ) ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
Karnataka Politics: ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ – ಕಾಂಗ್ರೆಸ್
ಈ ಕುರಿತಂತೆ ಬೆಂಗಳೂರು ನಗರ ಜಿಲ್ಲೆಯ ( Bengaluru City District ) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಖಾಲಿ ಇರುವಂತ 32 ಸಮುದಾಯ ಆರೋಗ್ಯ ಅಧಿಕಾರಿಗಳ ( Community Health Officer – CHO ) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆನ್ ಲೈನ್ ( Online ) ಮೂಲಕ ಅರ್ಜಿಯನ್ನು ಆಹ್ವಾನಿಸಿರೋದಾಗಿ ತಿಳಿಸಿದ್ದಾರೆ.
ಹುದ್ದೆಗಳ ವಿವರ – ಸಮುದಾಯ ಆರೋಗ್ಯ ಅಧಿಕಾರಿ – 32 ಹುದ್ದೆಗಳು
ವಿದ್ಯಾರ್ಹತೆ – ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದಂತ ಅರ್ಹ ಅಭ್ಯರ್ಥಿಗಳು ಬಿಎಸ್ಸಿ ( B.Sc ) ಮತ್ತು ಪೋಸ್ಟ್ ಬಿಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
BIG NEWS: ‘ಸಚಿವ ಶ್ರೀರಾಮುಲು’ಗೆ ‘ಮೊಳಕಾಲ್ಮೂರು ಕ್ಷೇತ್ರ’ದಲ್ಲಿ ಸೋಲಿನ ಭೀತಿ: ‘ಹೊಸ ಕ್ಷೇತ್ರ’ಕ್ಕೆ ಹುಡುಕಾಟ?
ಮಾಸಿಕ ಸಂಭಾವನೆ – ಪ್ರತಿ ತಿಂಗಳು ರೂ.22,000 ಜೊತೆಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ ರೂ.8,000 ನೀಡಲಾಗುತ್ತದೆ.
ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳು http://karunadu.karnataka.gov.in/hfw ಜಾಲತಾಣಕ್ಕೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ.
BIGG NEWS : ಶಾಸಕ ಅರವಿಂದ ಬೆಲ್ಲದ್ ಹೆಸರಿನಲ್ಲಿ ಡೆತ್ ನೋಟ್ ಬರೆದು ಮಹಿಳೆ ಆತ್ಮಹತ್ಯೆಗೆ ಯತ್ನ!
ಅರ್ಜಿ ಸಲ್ಲಿಸಲು ದಿನಾನಕ 27-10-2022ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-11-2022 ಆಗಿರುತ್ತದೆ.