ಶಿವಮೊಗ್ಗ : 2022-23ನೇ ಸಾಲಿನಲ್ಲಿ ಪಿಎಂಕೆಎಸ್ವೈ ಅಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಸಲು ಅರ್ಹ ತೋಟಗಾರಿಕೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿದ ರೈತರು ತೋಟಗಾರಿಕೆ ಕಚೇರಿಯಿಂದ ಪೂರ್ವಭಾವಿ ಮಂಜೂರಾತಿ ಆದೇಶ ನೀಡಿದ ನಂತರ ರೈತರು ತಮ್ಮ ಬ್ಯಾಂಕ್ ಖಾತೆಯಿಂದ ನೆಫ್ಟ್/ ಆರ್ಟಿಜಿಎಸ್/ ಡಿಜಿಟಲ್ ಪೇಮೆಂಟ್ ಮುಖಾಂತರ ಅನುಮೋದಿತ ಕಂಪನಿಗೆ ಹಣ ಪಾವತಿ ಮಾಡಿದ ದಾಖಲೆ ಒದಗಿಸಿದ ನಂತರ ಮಾತ್ರ ಕಾರ್ಯಾದೇಶ ನೀಡಲಾಗುವುದು.
BREAKING NEWS: ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಜನರು, ಶಾಲಾ ವಿದ್ಯಾರ್ಥಿಗಳು
ಯಾವುದೇ ಕಾರಣಕ್ಕೂ ನೇರ ನಗದು ಪಾವತಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸುವ ರೈತರು ಯಾವುದೇ ಸಂದರ್ಭದಲ್ಲೂ ಸಹ ನಗದು ವ್ಯವಹಾರಕ್ಕೆ ಅವಕಾಶ ಕೊಡದೇ ಇಲಾಖಾ ಮಾರ್ಗಸೂಚಿ ಪ್ರಕಾರ ಬ್ಯಾಂಕ್ ಖಾತೆಯ ಮೂಲಕವೇ ವ್ಯವಹರಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.