ಶಿವಮೊಗ್ಗ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಣಾ ಇಲಾಖೆಯು 2022-23ನೇ ಸಾಲಿಗೆ ಬಿ.ಇಡಿ ಹಾಗೂ ಡಿ.ಇಡಿ ಕೋರ್ಸ್ಗಳಲ್ಲಿ ( B.Ed, D.Ed Courses ) ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಯೋಜನೆಯಡಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
BIG NEWS: ಮೋದಿ ನಿಂತು ಮಾತನಾಡೋ ಕೆಂಪು ಕೋಟೆ ಕಟ್ಟಿದ್ದೇ ಮುಸ್ಲೀಮರು – JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ
ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಗರಿಷ್ಟ ವರಮಾನ ರೂ. 6.00 ಲಕ್ಷಕ್ಕೆ ಮೀರಿರಬಾರದು.
BIG NEWS: ಈ ತಿಂಗಳಿನಿಂದಲೇ ರಾಜ್ಯಾಧ್ಯಂತ 438 ನಮ್ಮ ಕ್ಲಿನಿಕ್ ಕಾರ್ಯಾರಂಭ – ಸಚಿವ ಸುಧಾಕರ್ | Namma Clinic
ಆಸಕ್ತ ಅರ್ಹ ವಿದ್ಯಾರ್ಥಿಗಳು ಇಲಾಖಾ ವೆಬ್ಸೈಟ್ sevasindhu.karnataka.gov.in ಮೂಲಕ ದಿನಾಂಕ: 10/12/2022ರೊಳಗಾಗಿ ಸಲ್ಲಿಸಿ, ನಂತರ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಮೊಹರು ಮತ್ತು ಸಹಿ/ದೃಢೀಕರಣ ಪಡೆದುಕೊಂಡು, ಅರ್ಜಿಯೊಂದಿಗೆ ಸೂಕ್ತ ದಾಖಲೆಗಳ ಪ್ರತಿಯೊಂದಿಗೆ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಲಲ್ ರಸ್ತೆ, ದುರ್ಗಿಗುಡಿ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯಿಂದ ಷಡ್ಯಂತ್ರ: ಸೂಕ್ತ ಕಾನೂನು ಕ್ರಮಕ್ಕೆ ಡಿಜಿ&ಐಜಿಪಿಗೆ ರಮೇಶ್ ಬಾಬು ಪತ್ರ
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220206 ನ್ನು ಸಂಪರ್ಕಿಸುವುದು.