ಶಿವಮೊಗ್ಗ : ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2022-23ನೇ ಸಾಲಿನ ಜಿಲ್ಲಾ ವಲಯದ ತರಬೇತಿ ಹಆಗೂ ತರಬೇತಿ ಪಡೆದ ಫಲಾನುಭವಿಗಳಿಗೆ ಸುಧಾರಿತ ಉಪಕರಣ ವಿತರಣೆ ಕಾರ್ಯಕ್ರಮದಡಿ ಜಿಲ್ಲೆಯ ವ್ಯಾಪ್ತಿಗೊಳಪಡುವ ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ 270 ಗಂಟೆಗಳ ಅವಧಿಯ ಬೇಸಿಕ್ ಹೊಲಿಗೆ ತರಬೇತಿಯನ್ನು ಆಯಾ ತಾಲೂಕಿನ ನಿರ್ದಿಷ್ಟಪಡಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದು, ತರಬೇತಿ ನೀಡಲಿರುವ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
BREAKING NEWS: ಚಾಲಕನ ನಿಯಂತ್ರಣತಪ್ಪಿ ಹಳ್ಳಕ್ಕೆ ಇಳಿದ KSRTC ಬಸ್;25 ಮಂದಿ ಗಾಯ, ಆಸ್ಪತ್ರೆಗೆ ದಾಖಲು
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಡುವ ಅಥವಾ ಅನುದಾನ ಪಡೆಯುತ್ತಿರುವ ಸಂಸ್ಥೆಗಳಿಗೆ ಮೊದಲ ಆದ್ಯತೆ ನೀಡುವುದರಿಂದ ಈ ಸಂಬಂಧ ದಾಖಲೆಯನ್ನು ಒದಗಿಸುವುದು, ತರಬೇತಿ ನೀಡುವ ಸಂಸ್ಥೆಯು ಸ್ಥಳೀಯ ಸಂಸ್ಥೆಯಾಗಿದ್ದು, ತರಬೇತಿಗಳಣ್ನು ನೀಡಲು ಎಲ್ಲಾ ಮೂಲಭೂತ ಸೌಲಭ್ಯವನ್ನು ಹೊಂದಿರಬೇಕು. ಜಿಲ್ಲೆಯಲ್ಲಿ ಕನಿಷ್ಠ 5 ವರ್ಷ ಹೊಲಿಗೆ ತರಬೇತಿಯನ್ನು ನೀಡಿ ಅನುಭವ ಹೊಂಧಿರುವ ಮತ್ತು ಜಿಲ್ಲೆಯಲ್ಲಿ ತರಬೇತಿ ನೀಡಲು ಅಗತ್ಯ ಕಾರ್ಯಜಾಲವನ್ನು ಹೊಂದಿರಬೇಕು.
BIGG NEWS: ಪಟಾಕಿ ತಂದ ಆಪತ್ತು; ಪಟಾಕಿ ಸಿಡಿತದಿಂದ 78 ಮಕ್ಕಳಿಗೆ ಗಾಯ
ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಹೊಲಿಗೆ ತರಬೇತಿಗಳನ್ನು ನೀಡಿರುವ ಅನುಭವ ಹೊಂದಿರಬೇಕು. ತರಬೇತಿ ನೀಡಲು ಅಗತ್ಯ ಹೊಲಿಗೆ ಯಂತ್ರಗಳು ಮತ್ತು ನುರಿತ ಶಿಕ್ಷಕರನ್ನು ಹೊಂದಿರಬೇಕು. ಈ ಎಲ್ಲಾ ಅರ್ಹತೆಯನ್ನು ಹೊಂದಿರುವ ಸಂಸ್ಥೆಗಳು ದಿ: 04/11/2022 ರೊಳಗಾಗಿ ಉಪನಿರ್ದೇಶಕರ ಕಚೇರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, 3ನೇ ಮಹಡಿ, ಶಿವಪ್ಪ ನಾಯಕ ಕಚೇರಿ ಸಂಕೀರ್ಣ, ನೆಹರೂ ರಸ್ತೆ, ಶಿವಮೊಗ್ಗ ಇವರನ್ನು ಖುದ್ದಾಗಿ ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಐಫೋನ್ ಬಳಕೆದಾರರೇ ಎಚ್ಚರ ; ‘ಹೆಚ್ಚಿನ ಅಪಾಯ’ದ ಎಚ್ಚರಿಕೆ ನೀಡಿದೆ ಸರ್ಕಾರ ; ಏನು ಮಾಡ್ಬೇಕು.? ಇಲ್ಲಿದೆ ಮಾಹಿತಿ