ಧಾರವಾಡ: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಸನ್ 2024-25 ನೇ ಸಾಲಿನಲ್ಲಿ ಭರ್ತಿಯಾಗಿ ಖಾಲಿ ಉಳಿದಿರುವ ಹುದ್ದೆಗಳು ಮತ್ತು ಸನ್ 2025-26 ನೇ ಸಾಲಿನ ಆರ್‍ಓಪಿ ಯಲ್ಲಿ ಅನುಮೋದನೆಯಾಗಿರುವ ಹುದ್ದೆಗಳಿಗೆ, ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರು ರಾಷ್ಟ್ರೀಯ ಆರೋಗ್ಯ ಅಭಿಯಾನದ ಸುತ್ತೋಲೆ ಅನುಸಾರ ಕಂಪ್ಯೂಟರ್ ಸಾಕ್ಷರತೆ ಪರಿಕ್ಷೆಯಲ್ಲಿ ತೇರ್ಗಡೆಯಾದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಒಟ್ಟು 42 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿ, ಆಯ್ಕೆ ಪ್ರಕ್ರೀಯೆಯನ್ನು ಹಾಗೂ ಯೋಜನೆಯ ನಿಯಮಾನುಸಾರ ಮೇರಿಟ್ ಹಾಗೂ ರೊಷ್ಠರ್ ಆಧಾರದ ಮೇಲೆ ಮಾರ್ಚ್ 31, 2026 ವರೆಗೆ ಅಥವಾ ಸರ್ಕಾರದ ನಿಯಮಾವಳಿ ಸುತ್ತೋಲೆಯ ಪ್ರಕಾರ ಯಾವುದು ಮೊದಲು ಅದಕ್ಕೆ ಅನುಗುಣವಾಗಿ ವಿವಿಧ ಕಾರ್ಯಕ್ರಮದ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಡಿಸೆಂಬರ್ 02 ಮತ್ತು 03, 2025 ರಂದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿ, ಆಯ್ಕೆ ಪ್ರಕ್ರೀಯೆಯನ್ನು ಕೈಗೊಳ್ಳಲಾಗುವುದು.
ಅರ್ಹ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಮೂಲ ದಾಖಲಾತಿಗಳೊಂದಿಗೆ ಡಿಸೆಂಬರ್ 02 ಮತ್ತು 03, 2025 ದಿನಾಂಕದಂದು ಅಭ್ಯರ್ಥಿಯು ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು. ಹುದ್ದೆಗಳ ವಿವರ, ವಿದ್ಯಾರ್ಹತೆ ಮತ್ತು ರೋಷ್ಠರ ಹಾಗೂ ಹೆಚ್ಚಿನ ಮಾಹಿತಿಯು ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯ ಸೂಚನಾ ಫಲಕಕ್ಕೆ ಲಗತ್ತಿಸಲಾಗಿರುತ್ತದೆ. ಹುದ್ದೆಗಳನ್ನು ಹೆಚ್ಚಿಸುವ ಮತ್ತು ಕಡಿತಗೊಳಿಸುವ ಅಧಿಕಾರವನ್ನು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹೊಂದಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಉಪಾದ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಗೌರವಗಳೊಂದಿಗೆ IAS ಅಧಿಕಾರಿ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ: ಪ್ರಾಮಾಣಿಕ ಅಧಿಕಾರಿ ಇನ್ನೂ ನೆನಪು ಮಾತ್ರ
BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ








