ಸ್ಯಾನ್ ಫ್ರಾನ್ಸಿಸ್ಕೋ: ಐಫೋನ್, ಐಪ್ಯಾಡ್ ಮತ್ತು ಮ್ಯಾಕ್ಗಳಲ್ಲಿನ ಭದ್ರತಾ ದೋಷ ಕುರಿತು ಆಪಲ್ ಎಚ್ಚರಿಕೆ ನೀಡಿದೆ. ಭದ್ರತಾ ದೋಷದಿಂದ ಹ್ಯಾಕರ್ಗಳು ಡಿವೈಸ್ ಮೇಲೆ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ತುರ್ತಾಗಿ ಸಾಫ್ಟ್ವೇರ್ ಅಪ್ಡೇಟ್ ಇನ್ಸ್ಟಾಲ್ ಮಾಡುವಂತೆ ಕಂಪನಿ ಒತ್ತಾಯಿಸಿದೆ.
ಈ ದೋಷದಿಂದಾಗಿ ಹ್ಯಾಕರ್ಗಳು ಉತ್ತಮ ಲಾಭ ಪಡೆದುಕೊಳ್ಳಬಹುದು ಕಂಪನಿ ಹೇಳಿದೆ. ಆದ್ರೆ, ಈ ಸಮಸ್ಯೆಯನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳಲಾಗಿದೆ ಎಂಬ ಬಗ್ಗೆ ತನ್ನಲ್ಲಿ ಮಾಹಿತಿ ಇದೆಯೇ ಎಂಬುದನ್ನು ಆಪಲ್ ಇನ್ನೂ ಬಹಿರಂಗಪಡಿಸಿಲ್ಲ.
iPhones6S ಹಾಗೂ ನಂತರದ ಮಾದರಿಗಳನ್ನು ನವೀಕರಿಸಲು ಭದ್ರತಾ ತಜ್ಞರು ಬಳಕೆದಾರರಿಗೆ ಸಲಹೆ ನೀಡಿದ್ದಾರೆ. 5 ನೇ ತಲೆಮಾರಿನ ಸೇರಿದಂತೆ ನಂತರದ ಎಲ್ಲ ಐಪ್ಯಾಡ್ ಪ್ರೊ ಮಾದರಿಗಳು ಮತ್ತು ಐಪ್ಯಾಡ್ ಏರ್ 2 ಸೇರಿದಂತೆ iPad ನ ಹಲವಾರು ಮಾದರಿಗಳು ಮತ್ತು Mac ಕಂಪ್ಯೂಟರ್ಗಳನ್ನು ಚಲಾಯಿಸುವ MacOS Monterey ಅಪ್ಡೇಟ್ ಮಾಡಲು ಬಳಕೆದಾರರಿಗೆ ಆಪಲ್ ಕಂಪನಿ ಎಚ್ಚರಿಕೆ ನೀಡಿದೆ.
ಈ ತಾಂತ್ರಿಕ ದೋಷವು ತನ್ನ ಯಾವುದೇ ಡೇಟಾ ಅಥವಾ ಸಾಮರ್ಥ್ಯಗಳನ್ನು ಪ್ರವೇಶಿಸುವ ಸಾಧನಗಳ ನಿಯಂತ್ರಣವನ್ನು ತೆಗೆದುಕೊಳ್ಳಲು ಹ್ಯಾಕರ್ ದೋಷವನ್ನು ಬಳಸಬಹುದೆಂದು ಕಂಪನಿ ಸೂಚಿಸಿದೆ.
Breaking news: ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: 9 ಬಿಜೆಪಿ ಕಾರ್ಯಕರ್ತರ ಬಂಧನ
ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಕೇರಳ ಮೂಲದ ಸೇನಾಧಿಕಾರಿಯ ಮೃತದೇಹ ನದಿಯಲ್ಲಿ ಪತ್ತೆ