ಕೋಲಾರ: ಮಳಿಗೆ ಬಾಡಿಗೆ ನೀಡೋ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ಟಿರುವಂತ ಎಪಿಎಂಸಿ ಕಾರ್ಯದರ್ಶಿ ಎನ್ ವಿಜಯಲಕ್ಷ್ಮೀ ಅವರ ಲಂಚಾವತಾರದ ವೀಡಿಯೋ ಸಖತ್ ವೈರಲ್ ಆಗಿದೆ.
ತರಕಾರಿ ದಲ್ಲಾಳಿಗಳ ಸಂಘದ ಮುಖಂಡರ ಬಳಿಯಲ್ಲಿ ಮಾತನಾಡಿರುವಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವಂತ ವೀಡಿಯೋದಲ್ಲಿ ಎಪಿಎಂಸಿ ಮಹಿಳೆಯೊಂದನ್ನು ವರ್ತಕರ ಹೆಸರಿಗೆ ನೋಂದಾಯಿಸೋದಕ್ಕಾಗಿ ಸುಮಾರು 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದಷ್ಟೇ ಅಲ್ಲದೇ ಎಂಪಿಎಂಸಿ ಮಳಿಗೆಗಳನ್ನು ನೋಂದಾಯಿಸೋದಕ್ಕಾಗಿ 12 ಟೇಬಲ್ ಬದಲಾಯಿಸಬೇಕು. 12 ಟೇಬಲ್ ಅಧಿಕಾರಿ, ಸಿಬ್ಬಂದಿಗಳಿಗೆ ಹಣ ನೀಡಬೇಕು. ಇದರಲ್ಲಿ ನನಗೆ 100 ರೂ ಕೂಡ ಸಿಗೋದಿಲ್ಲ ಎಂದಿದ್ದಾರೆ.
ಎಪಿಎಂಸಿ ಕಾರ್ಯದರ್ಶಿ ಕಚೇರಿಯಲ್ಲೇ ಎನ್ ವಿಜಯಲಕ್ಷ್ಮಿ ವರ್ತಕ ಸತೀಶ್ ಎಂಬುವರಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಎಪಿಎಂಸಿ ಕಾರ್ಯದರ್ಶಿ ಎನ್ ವಿಜಯಲಕ್ಷ್ಮೀ, ಈ ವೀಡಿಯೋ ಒಂದೂವರೆ ವರ್ಷದ ಹಿಂದಿನದ್ದು ಆಗಿದೆ. ಈಗ ವೈರಲ್ ಆಗಿದೆ. ಅಂದು ಸತೀಶ್ ಅಕ್ರಮವಾಗಿ ಮಳಿಗೆ ನೀಡುವಂತೆ ಕೇಳಿದ್ದರು. ಇದಕ್ಕೆ ಒಪ್ಪಿರಲಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
BREAKING : ವಿಜಯಪುರದಲ್ಲಿ ಯುವಕನ ಭೀಕರ ಹತ್ಯೆ : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ
ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ‘ಡಾ.ಕೆ.ಕೆ ಮಂಜುನಾಥ್’ ಗೆಲ್ಲಿಸಿ- ಮಧು ಬಂಗಾರಪ್ಪ ಮನವಿ
BREAKING: ನಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ತಂದೆ ‘ನಟೇಶನ್ ಗಣೇಶನ್’ ವಿಧಿವಶ