ಹುಬ್ಬಳ್ಳಿ : ಲವ್ ಜಿಹಾದ್ ಪ್ರಕರಣದಲ್ಲಿ ಜಿಮ್ ಟ್ರೈನರ್ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ಇದೀಗ ಸಂತ್ರಸ್ತೆಗೆ ಸಮೀರ್ 8 ರಿಂದ 10 ಬಾರಿ ಗರ್ಭಪಾತದ ಮಾತ್ರೆ ನೀಡಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಸಮೀರ್ ಮೊಬೈಲ್‌ನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಮತ್ತಷ್ಟು ಬಯಲಾಗಿದೆ. ಮೊಬೈಲ್‌ನಲ್ಲಿ ಕೆಲ ರೋಚಕ ವಿಡಿಯೋಗಳು, ಯುವತಿಯರೊಂದಿಗಿನ ವಾಟ್ಸಪ್ ಚಾಟ್‌ಗಳು ಪತ್ತೆಯಾಗಿದೆ. ಮೊಬೈಲ್‌ನಲ್ಲಿ ಸಂತಸ್ತೆ ಗರ್ಭಪಾತದ ಮಾತ್ರೆ ತೆಗೆದುಕೊಳ್ಳುತ್ತಿರುವ ವಿಡಿಯೋ ಕೂಡ ಸಿಕ್ಕಿವೆ.
ಸಮೀರ್ ಪ್ರತಿ ಸಾರಿ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಗರ್ಭಪಾತ ಮಾತ್ರೆ ಕೊಡಿಸುತ್ತಿದ್ದ. ಒಂದು ವೇಳೆ ನಿರಾಕರಿಸಿದ್ದರೆ ಒತ್ತಡ ಹೇರುತ್ತಿದ್ದ. ಅದಕ್ಕಾಗಿ ಮಾತ್ರೆ ತೆಗೆದುಕೊಳ್ಳುವಾಗ ವಿಡಿಯೋ ಮಾಡಿ ಕಳಿಸುವಂತೆ ಸಂತ್ರಸ್ತೆಗೆ ಸೂಚಿಸಿದ್ದ. ಇದೇ ರೀತಿ 8 ರಿಂದ 10 ಸಾರಿ ಗರ್ಭಪಾತದ ಮಾತ್ರೆ ನೀಡಿದ್ದ ಎನ್ನುವುದು ಮೊಬೈಲ್‌ನಿಂದ ಬಲಯಾಗಿದೆ.
ಇನ್ನು ಸಂತ್ರಸ್ತೆ ಯುವತಿ ನಾನು ಜಿಮ್‌ಗೆ ಹೋಗುವಾಗ ಸಮೀರ್ ಪರಿಚಯವಾಗಿದ್ದ. 2025ರ ಆ.16ರಂದು ನನ್ನ ಮನೆಗೆ ಕರೆಸಿಕೊಂಡಿದ್ದ. ಆ ವೇಳೆ ಜ್ಯೂಸ್‌ನಲ್ಲಿ ಮತ್ತು ಬರೋ ಪದಾರ್ಥ ಹಾಕಿ ನನಗೆ ಕುಡಿಸಿದ್ದ. ಬಳಿಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದನ್ನು ವಿಡಿಯೋ ಮಾಡಿಟ್ಟುಕೊಂಡು ಬೆದರಿಕೆ ಹಾಕಿದ್ದ. ಇದಾದ ಬಳಿಕ ಬೆದರಿಕೆ ಹಾಕಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಸದ್ಯ ಯುವತಿಯ ದೂರಿನ ಆಧಾರದ ಮೇಲೆ ಸಮೀರ್ ವಿರುದ್ಧ ಬಿಎನ್‌ಎಸ್ 64(1), 351, 123 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ದೂರಿನ ಹಿನ್ನೆಲೆ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸದ್ಯ ಸಮೀರ್ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಲವ್ ಜಿಹಾದ್ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸಮೀರ್ ಬಂಡವಾಳ ಮತ್ತಷ್ಟು ಬಯಲಾಗಿದೆ.
ಬೇರೆ ಬೇರೆ ಯುವತಿಯರ ಜೊತೆಗೆ ಸಮೀರ್ ಇರುವ ಪೋಟೋಗಳು ವೈರಲ್ ಆಗಿದೆ. ಜೀಮ್‌ಗೆ ಬರುವ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಸ್ನೇಹ ಬೆಳೆಸಿಕೊಳ್ಳುತ್ತಿದ್ದ. ಪೊಲೀಸರು ಸಮೀರ್ ಮೊಬೈಲ್ ಪರಿಶೀಲನೆ ಮಾಡಿದಾಗ ಹಲವು ವಿಚಾರಗಳು ಬಯಲಾಗಿವೆ. ಬ್ರೌಸಿಂಗ್ ಹಿಸ್ಟರಿಯಲ್ಲಿ ಅಸಭ್ಯ ಮತ್ತು ನಿಷೇಧಿತ ವೆಬ್ ಬಳಕೆ ಮಾಡುತ್ತಿರುವುದು ಗೊತ್ತಾಗಿದೆ








