ಬಳ್ಳಾರಿ : ರಾಜ್ಯದಲ್ಲಿ ದಿನೇ -ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು ಬಾಲಕ ಶಂಕಿತ ಡೆಂಗ್ಯೂಗೆ ಬಲಿಯಾಗಿದ್ದಾನೆ.
BIGG NEWS: ಜೈಲಿನಿಂದ ಹೊರಗೆ ಬಂದ ಕೈದಿಗಳಿಗೆ ಗುಡ್ ನ್ಯೂಸ್: ಉದ್ಯೋಗ ಕೊಡಿಸಲು ಸಿದ್ಧತೆ
ಬಳ್ಳಾರಿಯ ಸಿರಗುಪ್ಪ ಪಟ್ಟಣದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವನ್ನಪ್ಪಿದ ದುರಂತ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ. ಸಿರಗುಪ್ಪ ಪಟ್ಟಣದ 8 ವರ್ಷದ ಬಾಲಕ ನಿಖಿಲ್ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದನು, ಡೆಂಗ್ಯೂ ಜ್ವರದಿಂದ ಮಕ್ಕಳ ವಾರ್ಡ್ಗೆ ದಾಖಲಾಗಿದ್ದ ನಿಖಿಲ್. ಚಿಕಿತ್ಸೆ ಫಲಿಸದೇ ಸೆ.14ರಂದು ಸಾವನ್ನಪ್ಪಿದ್ದಾನೆ. ಇದೀಗ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಡೆಂಗ್ಯೂ ಲಕ್ಷಣಗಳೇನು?
ಡೆಂಗ್ಯೂ ಜ್ವರವು 104 F (40 C) ನಷ್ಟು ಹೆಚ್ಚಿನ ಜ್ವರವನ್ನು ಉಂಟುಮಾಡುತ್ತದೆ. ಜೊತೆಗೆ ತಲೆನೋವು, ಸ್ನಾಯು, ಮೂಳೆ ಅಥವಾ ಕೀಲು ನೋವು, ವಾಕರಿಕೆ, ವಾಂತಿ, ಕಣ್ಣುಗಳ ಹಿಂದೆ ನೋವು, ಊದಿಕೊಂಡ ಗ್ರಂಥಿಗಳು, ರ್ಯಾಶಸ್ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ.
BIGG NEWS: ಜೈಲಿನಿಂದ ಹೊರಗೆ ಬಂದ ಕೈದಿಗಳಿಗೆ ಗುಡ್ ನ್ಯೂಸ್: ಉದ್ಯೋಗ ಕೊಡಿಸಲು ಸಿದ್ಧತೆ
ಡೆಂಗ್ಯೂ ಜ್ವರಕ್ಕೆ ಕಾರಣ ಏನು?
ಡೆಂಗ್ಯೂ ಜ್ವರವು ನಾಲ್ಕು ವಿಧದ ಡೆಂಗ್ಯೂ ವೈರಸ್ಗಳಲ್ಲಿ ಯಾವುದಾದರೂ ಒಂದರಿಂದ ಉಂಟಾಗುತ್ತದೆ. ಸೋಂಕಿತ ವ್ಯಕ್ತಿಯ ಬಳಿ ಇರುವಾಗ ಡೆಂಗ್ಯೂ ಜ್ವರ ಬರುವುದಿಲ್ಲ. ಬದಲಾಗಿ ಸೊಳ್ಳೆ ಕಡಿತದಿಂದ ಡೆಂಗ್ಯೂ ಜ್ವರ ಹರಡುತ್ತದೆ. ಡೆಂಗ್ಯೂ ವೈರಸ್ಗಳನ್ನು ಹೆಚ್ಚಾಗಿ ಹರಡುವ ಎರಡು ವಿಧದ ಸೊಳ್ಳೆಗಳು ಮಾನವನ ವಸತಿಗೃಹಗಳಲ್ಲಿ ಮತ್ತು ಸುತ್ತಮುತ್ತ ಸಾಮಾನ್ಯವಾಗಿದೆ. ಡೆಂಗ್ಯೂ ವೈರಸ್ ಸೋಂಕಿತ ವ್ಯಕ್ತಿಯನ್ನು ಸೊಳ್ಳೆ ಕಚ್ಚಿದಾಗ, ವೈರಸ್ ಸೊಳ್ಳೆಯೊಳಗೆ ಪ್ರವೇಶಿಸುತ್ತದೆ. ನಂತರ, ಸೋಂಕಿತ ಸೊಳ್ಳೆ ಇನ್ನೊಬ್ಬ ವ್ಯಕ್ತಿಯನ್ನು ಕಚ್ಚಿದಾಗ, ವೈರಸ್ ಆ ವ್ಯಕ್ತಿಯ ರಕ್ತವನ್ನು ಪ್ರವೇಶಿಸುತ್ತದೆ ಮತ್ತು ಸೋಂಕನ್ನು ಉಂಟುಮಾಡುತ್ತದೆ.
BIGG NEWS: ಜೈಲಿನಿಂದ ಹೊರಗೆ ಬಂದ ಕೈದಿಗಳಿಗೆ ಗುಡ್ ನ್ಯೂಸ್: ಉದ್ಯೋಗ ಕೊಡಿಸಲು ಸಿದ್ಧತೆ