ಬೆಂಗಳೂರು : ಸಿಲಿಕಾನ್ ಸಿಟಿ ರಸ್ತೆ ಗುಂಡಿ ಮುಕ್ತಿ ಇನ್ನೂ ಸಿಕ್ಕಿಲ್ಲ.. ದಿನದಿಂದ ದಿನಕ್ಕೆ ರಸ್ತೆ ಗುಂಡಿ ಹೆಚ್ಚಾಗಿದ್ದು, ಅನಾಹುತ ತಪ್ಪಿಲ್ಲ ರಸ್ತೆಗುಂಡಿಗಳ ಸಮಸ್ಯೆ ಈ ಶತಮಾನದಲ್ಲೂ ಕೊನೆಗಾಣುವ ಲಕ್ಷಣಗಳಿಲ್ಲ.
ರವಿವಾರ ರಾತ್ರಿ ನಗರದ ಬಸವನಗುಡಿ (Basavana Gudi) ಏರಿಯಾದ ಟ್ಯಾಗೋರ್ ಸರ್ಕಲ್ ಬಳಿ ಸ್ಕೂಟರ್ ಸವಾರೊಬ್ಬರು ತಮ್ಮ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಹೋಗುವಾಗ ಇಲ್ಲಿ ಕಾಣುತ್ತಿರುವ ಮ್ಯಾನ್ ಹೋಲ್ (manhole) ಮುಚ್ಚಳ ತೆರೆದುಕೊಂಡಿದ್ದರಿಂದ ವಾಹನದ ಚಕ್ರ ಅದರಲ್ಲಿ ಸಿಕ್ಹಾಕಿಕೊಂಡು ಮಗುವಿನೊಂದಿಗೆ ಬಿದ್ದಿದ್ದಾರೆ.
ಅದೃಷ್ಟವಶಾತ್ ಅವರೆಲ್ಲರಿಗೆ ಚಿಕ್ಕಪುಟ್ಟ ಗಾಯಗಳು ಮಾತ್ರ ಆಗಿವೆ. ಬಿಬಿಎಮ್ ಅಧಿಕಾರಿಗಳು ಮತದದಾರರ ಡಾಟಾ ಕಳುವು (voter date theft) ಮಾಡುವ ಮಹತ್ಕಾರ್ಯದಲ್ಲಿ ತಲ್ಲೀನರಾಗಿರಬೇಕಾದರೆ, ರಸ್ತೆಗುಂಡಿಗಳು ಎಂದಿನಂತೆ ಅನಾಥವಾಗಿದೆ