ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ( Karnataka State Road Transport Corporation – KSRTC ) ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇರಿಸಿದೆ. ಅದೇ ಅಪಘಾತವಾದಂತ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಸೇವೆ ನೀಡುವುದಕ್ಕಾಗಿ ಇದೀಗ 20 ಬೊಲೆರೋ ವಾಹನಗಳ ವ್ಯವಸ್ಥೆಯನ್ನು ಮಾಡಿದೆ. ಈ ವಾಹನಗಳು 24×7 ಸಮಯ ಕಾರ್ಯನಿರ್ವಹಿಸೋದಕ್ಕೂ ವ್ಯವಸ್ಥೆಯನ್ನು ನಿಗಮದಿಂದ ಮಾಡಿದೆ.
ಪಟಾಕಿ ಸಿಡಿತದಿಂದ ಹೊತ್ತಿ ಉರಿದ ತಮಿಳುನಾಡಿನ ಶಿವಕಾಶಿ ದೇವಸ್ಥಾನದ ಗೋಪುರ… WATCH VIDEO
ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯಿಂದ ( KSRTC ) ಮಾಹಿತಿ ನೀಡಲಾಗಿದ್ದು, ಇಂದು ನಿಗಮದ ವತಿಯಿಂದ ನೂತನವಾಗಿ 20 ಬೊಲೆರೋ ವಾಹನಗಳನ್ನು ಸೇರ್ಪಡೆ ಗೊಳಿಸಲಾಯಿತು. ನಿಗಮದ ಮಾನ್ಯ ಅಧ್ಯಕ್ಷರಾದ ಎಂ ಚಂದ್ರಪ್ಪ ರವರು ನೂತನ ವಾಹನಗಳಿಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದೆ.
ಈ ವೇಳೆ ಮಾತನಾಡಿದ ಅವರು, ಈ ವಾಹನಗಳನ್ನು ವಿಭಾಗಗಳಲ್ಲಿ ಅಪಘಾತ ನಡೆದ ಸ್ಥಳಕ್ಕೆ ತ್ವರಿತವಾಗಿ ತಲುಪಲು ಹಾಗೂ ಗಾಯಾಳುಗಳಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯ ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಸೇರ್ಪಡೆಗೊಳಿಸಲಾಗಿದೆ. ಮತ್ತು ವಿಭಾಗಗಳ ವ್ಯಾಪ್ತಿಯಲ್ಲಿನ ಹೆಚ್ಚು ಅಪಘಾತ ಆಗುವ ಸ್ಥಳಗಳ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಜಾಗೃತೆ ಹಾಗೂ ಮುನ್ಸೂಚನೆ ನೀಡಲು ಮತ್ತು ತನಿಖಾದಳಧ ಕಾರ್ಯಕ್ಕೆ ಈ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮಾತನಾಡಿ, ಈ ವಾಹನಗಳನ್ನು ಅಪಘಾತ ಪರಿಹಾರ ನಿಧಿಯಿಂದ ಸೇರ್ಪಡೆಗೊಳಿಸಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಹಾಗೂ ಚಾಲನಾ ಸಿಬ್ಬಂದಿಗಳು ಅಪಘಾತಕ್ಕೆ ಒಳಗಾಗಬಾರದು, ಆದರೂ ಅಪಘಾತ ಆಕಸ್ಮಿಕವೇ, ಇಂತಹ ಸಂದರ್ಭಗಳಲ್ಲಿ, ತುರ್ತು ಪರಿಹಾರ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ನಿಗಮದ ವ್ಯಾಪ್ತಿಯ 16 ವಿಭಾಗಗಳಲ್ಲಿ ಈ ವಾಹನಗಳು 24×7 ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸುತ್ತಾ, ನಿಗಮದಲ್ಲಿ ಕಾರ್ಮಿಕ ಕಲ್ಯಾಣಕ್ಕಾಗಿ ಹೆಚ್ಚು ಒತ್ತನ್ನು ನೀಡುತ್ತಿರುವ ಬಗ್ಗೆ ಪುನರುಚ್ಚಿಸಿದರು ಎಂದು ಹೇಳಿದ್ದಾರೆ.
‘ಪಡಿತರ ಚೀಟಿದಾರ’ರಿಗೆ ಬಿಗ್ ಶಾಕ್ ; ಕೇಂದ್ರ ಸರ್ಕಾರ ಮಹತ್ವದ ಘೋಷಣೆ, ಆ ಎಲ್ಲ ‘ಕಾರ್ಡ್’ ರದ್ದು
ಈ ಕಾರ್ಯಕ್ರಮದಲ್ಲಿ ಡಾ. ನವೀನ್ ಭಟ್. ವೈ , ಭಾಆಸೇ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತೆ) ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.