ಬೆಂಗಳೂರು : ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಗೆ ಹೈ ಕೋರ್ಟ್ ಶಾಕ್ ನೀಡಿದೆ. ಬುಡಕ ಜಂಗಮ ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇದೀಗ ವಜಾಗೊಳಿಸಿದೆ. ಹೌದು ಬುಡಗ ಜಂಗಮ ಜಾತಿ ಪ್ರಮಾಣ ಪತ್ರ ಕೋರಿ ಕೊತ್ತೂರು ಮಂಜುನಾಥ್ ಮೇಲ್ಮನವಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠ ಕೊತ್ತೂರು ಮಂಜುನಾಥ ಅರ್ಜಿಯನ್ನು ವಜಾಗೊಳಿಸಿತ್ತು.
ಬಳಿಕ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರ ಆದರೆ ಇದೀಗ ಈ ಒಂದು ಮೇಲ್ಮನವಿ ಅರ್ಜಿ ಕೂಡ ವಜಾಗೊಂಡಿದೆ. ಶಾಲಾ ಕಾಲೇಜುಗಳಲ್ಲಿ ಭೈರಾಗಿ ಜಾತಿಗೆ ಸೇರಿದವರು ಎಂದು ನಮೂದಿಸಿದ್ದರು ಆದರೆ ಬುಡಗ ಜಂಗಮ ಜಾತಿ ಪ್ರಮಾಣ ಪತ್ರಕ್ಕೆ ಶಾಸಕ ಮಂಜುನಾಥ್ ಮೇಲ್ಮನವಿ ಸಲ್ಲಿಸಿದ್ದರು ಆದರೆ ಇದೀಗ ಮೇಲ್ಮನವಿ ಅರ್ಜಿ ಕೂಡ ವಜಾಗೊಂಡಿದೆ.








