ದಾವಣಗೆರೆ: ನಾಪತ್ತೆಯಾದ ನಾಲ್ಕು ದಿನಗಳ ಬಳಿಕ, ಶಾಸಕ ಎಂ.ಪಿ ರೇಣುಕಾಚಾರ್ಯ ( MLA MP Renukacharya ) ತಮ್ಮನ ಮಗ ಚಂದ್ರಶೇಖರ್ ಶವವಾಗಿ ( Chandrashekhar Death Case ) ಪತ್ತೆಯಾಗಿದ್ದರು. ಚಂದ್ರು ಸಾವಿನ ಬಳಿಕ ಹಲವು ರಹಸ್ಯಗಳು, ಪ್ರಕರಣಕ್ಕೆ ಹೊಸ ಹೊಸ ಟ್ವಿಸ್ಟ್ ಗಳು ಸಿಕ್ಕುತ್ತಲೇ ಇವೆ. ಇದೀಗ ಚಂದ್ರಶೇಖರ್ ಶವ ಸಿಕ್ಕಾಗ ಒಳ ಉಡುಪೇ ಇರದಿದ್ದ ಮತ್ತೊಂದು ರಹಸ್ಯ ಬಯಲಾಗಿದೆ.
BIGG NEWS: ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಮೂವರ ದುರ್ಮರಣ
ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣದಲ್ಲಿ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ. ಚಂದ್ರಶೇಖರ್ ಶವ ತುಂಗಾ ನದಿಯ ಕಾಲುವೆಯಲ್ಲಿ ಪತ್ತೆಯಾದ ಬಳಿಕ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು.
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಂತ ಮರಣೋತ್ತರ ಪರೀಕ್ಷೆ ನಡೆಸುವ ವೇಳೆಯಲ್ಲಿ, ಚಂದ್ರಶೇಖರ್ ಮೈಮೇಲಿದ್ದ ಬಟ್ಟೆ ತೆಗೆಯುವಾಗ ಒಳ ಉಡುಪು ಇಲ್ಲದೇ ಇರಲಿಲ್ಲ ಎಂಬುದಾಗಿ ಚಂದ್ರು ತಂದೆ ರಮೇಶ್ ತಿಳಿಸಿದ್ದಾರೆ.
BIG BREAKING NEWS: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್
ಇನ್ನೂ ನನ್ನ ಮಗನನ್ನು ಕೊಲೆ ಮಾಡಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹಲವು ಸಂಗತಿಗಳು ಆತನ ಸಾವಿನ ಬಳಿಕ ತಿಳಿದು ಬರ್ತಾ ಇವೆ. ಒಳ ಉಡುಪು ಇಲ್ಲದಿರುವುದು ಒಂದು ಕಾರಣವಾದರೇ, ಚಂದ್ರು ಮರ್ಮಾಂಗ ಊದಿಕೊಂಡಿದ್ದು, ಚುಚ್ಚುಮದ್ದು ನೀಡಿರುವ ಸಾಧ್ಯತೆ ಇದೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.
BIGG NEWS : ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಕ್ರಮ : `FIR’ ದಾಖಲು