ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಯುವತಿಯ ವಿಚಾರಕ್ಕೆ ಮತ್ತೊಂದು ಕೊಲೆ ಮಾಡಿದ ಘಟನೆ ಇದೀಗ ಬೆಳಕಿದೆ ಬಂದಿದ್ದು, ಹಳೆ ಮದ್ರಾಸ್ ರಸ್ತೆ ನ್ಯೂ ಬಯ್ಯಪ್ಪನ ಹಳ್ಳಿ ಬಳಿ ನಡೆದಿದೆ.
BREAKING NEWS: ಕೆನಡಾ ಆಯ್ತು ಈಗ ಪಂಜಾಬ್ ನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸ
ಬನಶಂಕರಿಯ ಪ್ರಜ್ವಲ್ (19 ) ಕೊಲೆಯಾದ ಯುವಕ. ಪ್ರೀತಿಸುವಂತೆ ಯುವತಿಯನ್ನು ಪದೇ ಪದೇ ಪ್ರಜ್ವಲ್ ಎಂಬ ಹುಡುಗ ಪೀಡಿಸುತ್ತಿದ್ದ ಈ ಕಾರಣಕ್ಕಾಗಿ ನಿನ್ನೆ ಚಾಕುವಿನಿಂದ ಹಲ್ಲೆಗೈದು ಮೂವರು ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಪ್ರಜ್ವಲ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
BREAKING NEWS: ಕೆನಡಾ ಆಯ್ತು ಈಗ ಪಂಜಾಬ್ ನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸ
ಚಿಕಿತ್ಸೆ ಫಲಕಾರಿಯಾಗದೇ ಇಂದು ಪ್ರಜ್ವಲ್ ಸಾವನ್ನಪ್ಪಿದ್ದಾನೆ. ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆಗೈದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.