ಬೆಂಗಳೂರು: ನಗರದಲ್ಲಿ ಮತ್ತೊಂದು ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಕೋಟಿ ಕೋಟಿ ಹೂಡಿಕೆದಾರರಿಗೆ ಬ್ಯಾಂಕ್ ನಿಂದ ವಂಚನೆ ಮಾಡಿರೋ ಸಂಬಂಧ ಪೊಲೀಸ್ ಠಾಣೆಯಲ್ಲಿಯೂ ( Police Station ) ದೂರು ದಾಖಲಾಗಿದೆ.
ನಗರದಲ್ಲಿನ ಸಿರಿವೈಭವ ಪತ್ತಿನ ಸಹಕಾರ ಸಂಘದಿಂದ ಬಹುಕೋಟಿ ವಂಚನೆ ಮಾಡಿರೋ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಬ್ಯಾಂಕ್ ನಗರದಲ್ಲಿ ನಾಲ್ಕು ಶಾಖೆಗಳನ್ನು ಒಳಗೊಂಡಿದ್ದು, ಎರಡೂವರೆ ಸಾವಿರ ಹೂಡಿಕೆದಾರರನ್ನು ಹೊಂದಿದೆ ಎನ್ನಲಾಗಿದೆ.
BIG BREAKING NEWS: ‘ನಂದಿನ ಉತ್ಪನ್ನ ಬಳಕೆದಾರ’ರಿಗೆ ಬಿಗ್ ಶಾಕ್: ನಾಳೆಯಿಂದಲೇ ದರ ಹೆಚ್ಚಳ | Nandini Products
ಉತ್ತರ ಹಳ್ಳಿ, ಆರ್ ಆರ್ ನಗರ, ಬಿಳೇಕಹಳ್ಳಿ ಹಾಗೂ ಬಸವೇಶ್ವರ ನಗರದ ನಾಲ್ಕು ಬ್ರಾಂಚ್ ಗಳಿಂದ ಹೂಡಿಕೆದಾರರಿಗೆ ವಂಚನೆ ಮಾಡಿರೋದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಗ್ರಾಹಕರು ವಂಚನೆ ಸಂಬಂಧ ದೂರು ನೀಡಿದ್ದಾರೆ.
ಪೊಲೀಸರಿಗೆ ಸಿರಿವೈಭವ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ನಾಗವಲ್ಲಿ, ಅಪ್ಪಾಲಾಲ್ ಚಕೋಲಿ, ಹಿರೇಮಠ್ ಹಾಗೂ ನಿರ್ದೇಶಕರ ವಿರುದ್ಧವೂ ದೂರು ನೀಡಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವಂತ ಪೊಲೀಸರು, ಬ್ಯಾಂಕ್ ವಂಚನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Big news: ಕೇವಲ 18 ತಿಂಗಳಲ್ಲಿ 2 ಬಿಲಿಯನ್ ಕೋವಿಡ್ ಲಸಿಕೆ ವಿತರಿಸಿ ಹೊಸ ದಾಖಲೆ ನಿರ್ಮಿಸಿದ ಭಾರತ!