ಬೆಂಗಳೂರು: ಜಾತಿ ನಿಂದನೆ ಕೇಸಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗಿರುವಂತ ಬಿಜೆಪಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಕೊಲೆ ಆರೋಪದಡಿ ಎಫ್ಐಆರ್ ದಾಖಲಾಗಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ತೆರಳಿರುವಂತ ಸಂತ್ರಸ್ತರೊಬ್ಬರು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಕೊಲೆ ಆರೋಪದಡಿ ದೂರು ನೀಡಿದ್ದರು. ಈ ದೂರು ಆಧರಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಂದಹಾಗೇ ಶಾಸಕ ಮುನಿರತ್ನ ವಿರುದ್ಧ ನೀಡಿರುವಂತ ದೂರಿನಲ್ಲಿ ಕೊಲೆ ಯತ್ನ ಹಾಗೂ ಸುಫಾರಿ ಕೊಟ್ಟು ಕೊಲೆಗೆ ಪ್ರಯತ್ನಿಸಿರುವಂತ ಆರೋಪ ಮಾಡಲಾಗಿದೆ. ಹೀಗಾಗಿಯೇ ಅವರ ವಿರುದ್ಧ ಕೊಲೆ ಆರೋಪದಡಿ ಎಫ್ಐಆರ್ ಅನ್ನು ಪೊಲೀಸರು ದಾಖಲಿಸಿದ್ದಾರೆ.
ಚಿನ್ಮಯ್ ದಾಸ್ ನಂತರ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಅರ್ಚಕನ ಬಂಧನ: ಇಸ್ಕಾನ್ ಸದಸ್ಯ ಆರೋಪ
BIG NEWS : ಯಾರು ಕಣ್ಣೀರು ಹಾಕಬಾರದು, ನಾವು ಸತ್ತಿಲ್ಲ ಸೋತಿದ್ದೇವೆ ಅಷ್ಟೇ : ನಿಖಿಲ್ ಕುಮಾರಸ್ವಾಮಿ ಹೇಳಿಕೆ