ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಆಂತರಿಕ ಬೆಳವಣಿಗೆಗಳು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ. ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ ಸೇರಿದಂತೆ ಒಟ್ಟು ಏಳು ಮಂದಿ ಸಂಸದರು ಪಕ್ಷ ತೊರೆದಿರುವುದಕ್ಕೆ ಎಎಪಿ ನಾಯಕತ್ವದ ವೈಫಲ್ಯವೇ ಕಾರಣ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ನೇರ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಮೂಲ ಆಶಯಗಳಿಂದ ದೂರ ಸರಿಯುತ್ತಿರುವುದು ಮತ್ತು ನಾಯಕತ್ವದ ಏಕಪಕ್ಷೀಯ ನಿರ್ಧಾರಗಳೇ ಈ ರಾಜೀನಾಮೆಗಳಿಗೆ ಕಾರಣ ಎಂದು ಹಜಾರೆ ಅಭಿಪ್ರಾಯಪಟ್ಟಿದ್ದಾರೆ.ರಾಘವ್ ಚಡ್ಡಾ ಅವರಂತಹ ಪ್ರಭಾವಿ ನಾಯಕರು ಪಕ್ಷ ಬಿಟ್ಟಿರುವುದು ಎಎಪಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಂಡಿಯಾ ಅಗೆನ್ಸ್ಟ್ ಕರಪ್ಷನ್ (IAC) ಚಳವಳಿಯ ಮೂಲಕ ಹುಟ್ಟಿಕೊಂಡ ಈ ಪಕ್ಷವು ಇಂದು ತನ್ನ ಹಾದಿ ತಪ್ಪಿದೆ ಎಂದು ಹಜಾರೆ ವಿಷಾದ ವ್ಯಕ್ತಪಡಿಸಿದ್ದಾರೆ.








