ಬೆಂಗಳೂರು: ನಿರೂಪಕಿ ಅನುಶ್ರೀ ಅವರ ನಿರೂಪಣೆ ಬಗ್ಗೆ ಸದಾ ಒಂದಲ್ಲ ಒಂದು ವಿವಾದ ಇದ್ದೇ ಇರುತ್ತದೆ. ನಿರೂಪಣೆ ಮಾಡೋದು ಬಿಟ್ಟು ಬಾಕಿ ಎಲ್ಲ ಮಾಡ್ತಾರೆ ಅನ್ನೋದು ಅನೇಕರ ಅಭಿಪ್ರಾಯ ಕೂಡ.
ಟಿವಿ ಟಿಆರ್ಪಿಗಾಗಿ, ದುಡ್ಡಿಗಾಗಿ ಅನುಶ್ರೀ ನಡೆದುಕೊಳ್ಳುತ್ತಿದ್ದಾರೆ ಅಂತ ಅವರ ನಿರೂಪಣೆ ರೀತಿಯನ್ನು ಟೀಕೆ ಮಾಡುವವರು ಕೂಡ ಇದ್ದಾರೆ. ಈ ನಡುವೆ ಅಪ್ಪು ಹೆಸರಿನಲ್ಲಿ ನಿರೂಪಕಿ ಅನುಶ್ರೀ ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ ಅಂತ ಅನೇಕ ಮಂದಿ ಅನುಶ್ರೀಯವರ ನಡೆಯನ್ನು ಕಿಡಿಕಾರುತ್ತಿದ್ದಾರೆ. ಸಾಕಮ್ಮ ನಿನ್ನ ಓವರ್ ಆಕ್ಟಿಂಗ್ ಅಂತ ಅನುಶ್ರೀಗೆ ಬುದ್ದಿ ಹೇಳ್ತಾ ಇದ್ದಾರೆ. ಹೌದು, ಅಪ್ಪು ಅವರ ಅಭಿನಯದ ಕೊನೆ ಸಿನಿಮಾವನ್ನು ನೋಡಿಕೊಂಡು ಬಂದ ಅನುಶ್ರೀ ಮಾಧ್ಯಮಗಳ ಜೊತೆಗೆ ಮಾತನಾಡಿರುವುದನ್ನು ನೋಡಿರುವ ನೋಡುಗರು ಅನುಶ್ರೀಯವರ ಬಗ್ಗೆ ಟೀಕೆ ಮಾಡಲು ಶುರುಮಾಡಿದ್ದಾರೆ.