Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GDP ಮೇಲೆ ರಾಜ್ಯದ ಅಭಿವೃದ್ಧಿ ಲೆಕ್ಕ ಹೇಳುವುದಕ್ಕೆ ಆಗಲ್ಲ : ಸಿಎಂ ಹೇಳಿಕೆಗೆ ಕೇಂದ್ರ ಸಚಿವ HD ಕುಮಾರಸ್ವಾಮಿ ತಿರುಗೇಟು

14/04/2026 1:54 PM

ಬೆಂಗಳೂರಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಎಡವಟ್ಟು : UKG ಇಂದ 7ನೇ ತರಗತಿವರೆಗಿನ 80 ಮಕ್ಕಳು ಫೇಲ್ ಮಾಡಿದ ಶಾಲೆ!

14/04/2026 1:30 PM

`ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

14/04/2026 12:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಾಣಿ ರಕ್ಷಣೆಯಲ್ಲಿನ ಉತ್ಕೃಷ್ಟ ಸೇವೆಗೆ ‘ಅನಂತ್ ಅಂಬಾನಿ’ಗೆ ‘ವಂತಾರ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ’
INDIA

ಪ್ರಾಣಿ ರಕ್ಷಣೆಯಲ್ಲಿನ ಉತ್ಕೃಷ್ಟ ಸೇವೆಗೆ ‘ಅನಂತ್ ಅಂಬಾನಿ’ಗೆ ‘ವಂತಾರ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ’

By kannadanewsnow0927/02/2025 9:04 PM

ಗುಜರಾತ್ : ಅನಂತ್ ಅಂಬಾನಿ ಅವರ ವಂತಾರಗೆ ಭಾರತ ಸರ್ಕಾರವು ‘ಕಾರ್ಪೊರೇಟ್’ ವಿಭಾಗದ ಅಡಿಯಲ್ಲಿ ಪ್ರಾಣಿ ರಕ್ಷಣೆಗೆ ದೇಶದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ‘ಪ್ರಾಣಿ ಮಿತ್ರ’ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದೆ. ವಂತಾರ ಅಡಿಯಲ್ಲಿ ಆನೆಗಳ ರಕ್ಷಣೆ, ಚಿಕಿತ್ಸೆ ಮತ್ತು ಜೀವಿತಾವಧಿಯ ಆರೈಕೆಗೆ ಮೀಸಲಾಗಿರುವ ರಾಧೆ ಕೃಷ್ಣ ಟೆಂಪಲ್ ಎಲೆಫೆಂಟ್ ವೆಲ್ ಫೇರ್ ಟ್ರಸ್ಟ್ (RKTEWT)ನ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ವಂತಾರದ ಅತ್ಯಾಧುನಿಕ ಆನೆ ಆರೈಕೆ ಕೇಂದ್ರದಲ್ಲಿ ರಕ್ಷಿಸಲಾದ 240ಕ್ಕೂ ಹೆಚ್ಚು ಆನೆಗಳಿಗೆ ಸರಪಳಿ-ಮುಕ್ತ, ಸುರಕ್ಷಿತ ಮತ್ತು ಸಮೃದ್ಧ ವಾತಾವರಣವನ್ನು ಒದಗಿಸುತ್ತದೆ. ಇದರಲ್ಲಿ ಸರ್ಕಸ್‌ಗಳಿಂದ 30 ಆನೆಗಳು, ಮರ ಕಡಿಯುವ ಉದ್ಯಮದಿಂದ 100ಕ್ಕೂ ಹೆಚ್ಚು ಆನೆಗಳು ಮತ್ತು ಸವಾರಿ ಹಾಗೂ ಬೀದಿ ಭಿಕ್ಷಾಟನೆಯಂಥದ್ದರಿಂದ ರಕ್ಷಿಸಲಾದ ಇತರ ಆನೆಗಳೂ ಸೇರಿವೆ. ಅನೇಕ ಪ್ರಾಣಿಗಳು ವರ್ಷಗಳ ನಿರ್ಲಕ್ಷ್ಯ ಮತ್ತು ದೌರ್ಜನ್ಯವನ್ನು ಸಹಿಸಿಕೊಂಡಿದ್ಧಂಥವು. ಆದರೆ ವಂತಾರದಲ್ಲಿ ಅವುಗಳಿಗೆ ವಿಶ್ವ ದರ್ಜೆಯ ಪಶುವೈದ್ಯಕೀಯ ಚಿಕಿತ್ಸೆ ಮತ್ತು ಸಹಾನುಭೂತಿಯ ಆರೈಕೆ ಸಿಗುತ್ತದೆ.

998 ಎಕರೆಗಳಷ್ಟು ವಿಶೇಷವಾಗಿ ರೂಪಿಸಲಾದ ಕಾಡಿನಲ್ಲಿ ಮುಕ್ತವಾಗಿ ಸುತ್ತಾಡಲು, ಸಾಮಾಜಿಕವಾಗಿ ಮತ್ತು ನೈಸರ್ಗಿಕ ನಡವಳಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಕೇಂದ್ರದಲ್ಲಿ ಆನೆಗಳಿಗೆ ಅನುವು ಮಾಡಿಕೊಡುತ್ತದೆ. ಅಲ್ಲಿ ಅವು ಮೇವು ಹುಡುಕಿಕೊಳ್ಳಬಹುದು, ಮಣ್ಣು ಮತ್ತು ಧೂಳಿನ ಸ್ನಾನ ಮಾಡಬಹುದು ಹಾಗೂ ನೈಸರ್ಗಿಕ ಕೊಳಗಳಲ್ಲಿಯೂ ಸ್ನಾನ ಮಾಡಬಹುದು.

ನವದೆಹಲಿಯ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ವಂತಾರದ ಸಿಇಒ ವಿವಾನ್ ಕರಣಿ ಅವರು ಈ ಗೌರವವನ್ನು ಸ್ವೀಕರಿಸಿದರು. “ಈ ಪ್ರಶಸ್ತಿಯು ಭಾರತದ ಪ್ರಾಣಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ನೋಡಿಕೊಳ್ಳಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಂಖ್ಯಾತ ವ್ಯಕ್ತಿಗಳಿಗೆ ಗೌರವವಾಗಿದೆ. ವಂತಾರದಲ್ಲಿ ಪ್ರಾಣಿಗಳಿಗೆ ಸೇವೆ ಸಲ್ಲಿಸುವುದು ಕೇವಲ ಕರ್ತವ್ಯವಲ್ಲ – ಇದು ನಮ್ಮ ಧರ್ಮ ಮತ್ತು ಸೇವೆ, ಸಹಾನುಭೂತಿ ಮತ್ತು ಜವಾಬ್ದಾರಿಯಲ್ಲಿ ಆಳವಾಗಿ ಬೇರೂರಿರುವಂಥ ಬದ್ಧತೆಯಾಗಿದೆ. ಪ್ರಾಣಿ ರಕ್ಷಣೆಯ ಮಾನದಂಡಗಳನ್ನು ಹೆಚ್ಚಿಸುವ, ಪರಿಣಾಮಕಾರಿ ಉಪಕ್ರಮಗಳನ್ನು ನಡೆಸುವ ಮತ್ತು ಮುಂದಿನ ಪೀಳಿಗೆಗೆ ಭಾರತದ ಶ್ರೀಮಂತ ಜೀವವೈವಿಧ್ಯತೆಯನ್ನು ರಕ್ಷಿಸುವ ನಮ್ಮ ಧ್ಯೇಯದಲ್ಲಿ ನಾವು ಸದಾ ತೊಡಗಿಸಿಕೊಂಡಿದ್ದೇವೆ,” ಎಂದರು.

ಕಳೆದ ಐದು ವರ್ಷಗಳಿಂದ ಪ್ರಾಣಿಗಳ ಕಲ್ಯಾಣಕ್ಕೆ ನೀಡಿದ ನಿರಂತರ ಕೊಡುಗೆಗಾಗಿ ನಿಗಮಗಳು, ಸಾರ್ವಜನಿಕ ಉದ್ದಿಮೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ಕಾರ್ಪೊರೇಟ್ ವಿಭಾಗದಲ್ಲಿ ಪ್ರಾಣಿ ಮಿತ್ರ ಪ್ರಶಸ್ತಿಯನ್ನು ನೀಡಲಾಗುತ್ತದೆ, ಇದರಲ್ಲಿ ಪ್ರಾಣಿ ಕಲ್ಯಾಣ ಉಪಕ್ರಮಗಳಿಗೆ ಮೀಸಲಾಗಿರುವ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಯೂ ಸೇರಿದೆ.

ತ್ರಿಪುರಾದಲ್ಲಿ ಪೊಲೀಸರ ಭರ್ಜರಿ ಬೇಟೆ: 24 ಕೋಟಿ ಮೌಲ್ಯದ ಅಕ್ರಮ ಯಾಬಾ ಮಾತ್ರೆಗಳು ವಶ

BREAKING: ‘ಇಸ್ರೇಲ್’ನಲ್ಲಿ ಪಾದಚಾರಿಗಳಿಗೆ ವಾಹನ ಡಿಕ್ಕಿ: ಹಲವರಿಗೆ ಗಾಯ, ‘ಭಯೋತ್ಪಾದಕ ದಾಳಿ’ ಶಂಕೆ

Share. Facebook Twitter LinkedIn WhatsApp Email

Related Posts

BREAKING : ತಮಿಳು ನಟಿ ತ್ರಿಷಾ ಮನೆಗೆ ಬಾಂಬ್ ಬೆದರಿಕೆ ಕರೆ | Bomb Threat

14/04/2026 12:41 PM1 Min Read

‘ಗುಲಾಮನಂತೆ ದುಡಿಯುತ್ತಿದ್ದೇನೆ’ : ₹9 ಸಂಬಳ ಹೆಚ್ಚಳದ ಬಗ್ಗೆ ದೆಹಲಿ ಟೆಕ್ಕಿ ಹಂಚಿಕೊಂಡ ಪೋಸ್ಟ್ ವೈರಲ್.!

14/04/2026 12:28 PM2 Mins Read

ನಿಮ್ಮ `ಮೊಬೈಲ್ ಸೈಲೆಂಟ್’ ಮಾಡಿದರೆ ಬುದ್ಧಿ ಶಕ್ತಿ ಹೆಚ್ಚುತ್ತಾ? ಇಲ್ಲಿದೆ ಅಸಲಿ ಸತ್ಯ.!

14/04/2026 11:51 AM2 Mins Read
Recent News

GDP ಮೇಲೆ ರಾಜ್ಯದ ಅಭಿವೃದ್ಧಿ ಲೆಕ್ಕ ಹೇಳುವುದಕ್ಕೆ ಆಗಲ್ಲ : ಸಿಎಂ ಹೇಳಿಕೆಗೆ ಕೇಂದ್ರ ಸಚಿವ HD ಕುಮಾರಸ್ವಾಮಿ ತಿರುಗೇಟು

14/04/2026 1:54 PM

ಬೆಂಗಳೂರಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಎಡವಟ್ಟು : UKG ಇಂದ 7ನೇ ತರಗತಿವರೆಗಿನ 80 ಮಕ್ಕಳು ಫೇಲ್ ಮಾಡಿದ ಶಾಲೆ!

14/04/2026 1:30 PM

`ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

14/04/2026 12:54 PM

ಬೆಂಗಳೂರಲ್ಲಿ ಗರ್ಭಿಣಿ ಸೊಸೆಗೆ ಜಾತಿ ನಿಂದನೆ, ಕೊಲೆ ಬೆದರಿಕೆ : ಪೋಷಕರ ವಿರುದ್ಧವೆ ದೂರು ನೀಡಿದ ಮಗ!

14/04/2026 12:51 PM
State News
KARNATAKA

GDP ಮೇಲೆ ರಾಜ್ಯದ ಅಭಿವೃದ್ಧಿ ಲೆಕ್ಕ ಹೇಳುವುದಕ್ಕೆ ಆಗಲ್ಲ : ಸಿಎಂ ಹೇಳಿಕೆಗೆ ಕೇಂದ್ರ ಸಚಿವ HD ಕುಮಾರಸ್ವಾಮಿ ತಿರುಗೇಟು

By kannadanewsnow0514/04/2026 1:54 PM KARNATAKA 1 Min Read

ಬೆಂಗಳೂರು : ಜಿ ಡಿ ಪಿ ಮೇಲೆ ರಾಜ್ಯದ ಅಭಿವೃದ್ಧಿ ಲೆಕ್ಕ ಹೇಳುವುದಕ್ಕೆ ಆಗಲ್ಲ. ಕೇಂದ್ರದ ಜಿಡಿಪಿಗಿಂತ ರಾಜ್ಯದ ಜಿಡಿಪಿ…

ಬೆಂಗಳೂರಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಎಡವಟ್ಟು : UKG ಇಂದ 7ನೇ ತರಗತಿವರೆಗಿನ 80 ಮಕ್ಕಳು ಫೇಲ್ ಮಾಡಿದ ಶಾಲೆ!

14/04/2026 1:30 PM

`ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

14/04/2026 12:54 PM

ಬೆಂಗಳೂರಲ್ಲಿ ಗರ್ಭಿಣಿ ಸೊಸೆಗೆ ಜಾತಿ ನಿಂದನೆ, ಕೊಲೆ ಬೆದರಿಕೆ : ಪೋಷಕರ ವಿರುದ್ಧವೆ ದೂರು ನೀಡಿದ ಮಗ!

14/04/2026 12:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.