ಚಾಮರಾಜನಗರ: ರಾಜ್ಯದಲ್ಲೊಂದು ಅಮಾನವೀಯ ಘಟನೆ ಎನ್ನುವಂತೆ ಜಮೀನಿಗೆ ಹಸು ನುಗ್ಗಿ ಬೆಳೆ ಮೇಯ್ದ ಕಾರಣಕ್ಕಾಗಿ ವೃದ್ಧೆಯೊಬ್ಬರನ್ನು ಕಂಬಕ್ಕೆ ಕಟ್ಟಿಹಾಕಿ ಸತತ 2 ಗಂಟೆಗಳ ಕಾಲ ಥಳಿಸಿರುವಂತ ಘಟನೆ ಚಾಮರಾಜನಗರದ ಹನೂರಿನ ದೊಮ್ಮನಗದ್ದೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದೊಮ್ಮನಗದ್ದೆಯಲ್ಲಿ ಅಂಗಮುತ್ತು ಎಂಬುವರ ಜಮೀನಿಗೆ ಕಣ್ಣಮ್ಮ ಎಂಬುವರ ಹಸು ನುಗ್ಗಿ ಬೆಳೆ ಮೇಯ್ದಿತ್ತು. ಹೀಗಾಗಿ ವೃದ್ಧೆ ಕಣ್ಣಮ್ಮರನ್ನು ಕಂಬಕ್ಕೆ ಕಟ್ಟಿಹಾಕಿ ಸತತ 2 ಗಂಟೆಗಳ ಕಾಲ ಥಳಿಸಲಾಗಿದೆ.
ಅಂಕಮುತ್ತು, ಕುಟುಂಬದ ಸದಸ್ಯರು ಕಣ್ಣಮ್ಮಗೆ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಹಲ್ಲೆ ನಡೆಸಿದ್ದ ಅಂಗಮುತ್ತು, ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಕೇಸ್ ದಾಖಲಿಸಿ ಹನೂರು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING: ಶಾಸಕ ಬೇಳೂರು ಗೋಪಾಲಕೃಷ್ಣಗೆ ಮಾಜಿ ಸಚಿವ ಹರತಾಳು ಹಾಲಪ್ಪ ಮಾನನಷ್ಟ ಮೊಕದ್ದಮೆ ನೋಟಿಸ್
ಹುಬ್ಬಳ್ಳಿಯಲ್ಲಿ ಕಟೌಟ್ ಅಳವಡಿಕೆ ವೇಳೆ ಮುರಿದು ಬಿದ್ದ ಮೂವರಿಗೆ ಗಾಯ: ಆರೋಗ್ಯ ವಿಚಾರಿಸಿದ ಸಿಎಂ
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ








