ಹುಬ್ಬಳ್ಳಿಯಲ್ಲಿ ಕಟೌಟ್ ಅಳವಡಿಕೆ ವೇಳೆ ಮುರಿದು ಬಿದ್ದ ಮೂವರಿಗೆ ಗಾಯ: ಆರೋಗ್ಯ ವಿಚಾರಿಸಿದ ಸಿಎಂ

ಹುಬ್ಬಳ್ಳಿ : ಇಂದು ಮಂಟೂರು ರಸ್ತೆಯಲ್ಲಿ ಕಟೌಟ್ ಅಳವಡಿಸುತ್ತಿದ್ದಾಗ, ಆಕಸ್ಮಿಕವಾಗಿ ಕಟೌಟ್ ಬಿದ್ದು ಮೂವರು ಜನ ಗಾಯಗಳಾಗಿ ನಗರದ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಸತಿರಹಿತರಿಗೆ ನೂತನ ಮನೆಗಳ ವಿತರಣೆ ಕಾರ್ಯಕ್ರಮದ ನಂತರ, ಹುಬ್ಬಳ್ಳಿ ಸುಚಿರಾಯು ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಾದ ಬ್ಯಾಹಟ್ಟಿಯ ಶಂಕರ ಹಡಪದ (28), ಹುಬ್ಬಳ್ಳಿಯ ಶಾಂತಾ ಕ್ಯಾರಕಟ್ಟಿ ( 60) ಮತ್ತು ಧಾರವಾಡದ ಲಕ್ಷ್ಮಿ ನಗರದ ಮಂಜುನಾಥ (33) ಅವರನ್ನು ಮುಖ್ಯಮಂತ್ರಿಗಳು … Continue reading ಹುಬ್ಬಳ್ಳಿಯಲ್ಲಿ ಕಟೌಟ್ ಅಳವಡಿಕೆ ವೇಳೆ ಮುರಿದು ಬಿದ್ದ ಮೂವರಿಗೆ ಗಾಯ: ಆರೋಗ್ಯ ವಿಚಾರಿಸಿದ ಸಿಎಂ