ಮಂಡ್ಯ: ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿದೆ. ಆದರೆ ಕೆಲವರು ಅಧಿವೇಶನಕ್ಕೆ ಗೈರಾಗಿ ಪಂಚರತ್ನ ಯಾತ್ರೆ ನಡೆಸುತ್ತಿದ್ದಾರೆ.
ಇದೀಗ ಈ ಬಗ್ಗೆ ಮಾಜಿ ಶಾಸಕ ಚೆಲುವರಾಯಸ್ವಾಮಿ ವ್ಯಂಗ್ಯವಾಡಿದ್ದು, ಮಾತಿನ ಚಕಮಕಿ ಶುರುವಾಗಿದೆ. ಚೆಲುವರಾಯಸ್ವಾಮಿ ಹಾಗೂ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ನಡುವೆ ವಾಗ್ವದ ಉಂಟಾಗಿದೆ.ಚಲುವರಾಯಸ್ವಾಮಿ ಓರ್ವ ರಾಜಕೀಯ ಶಕುನಿ ಇದ್ದ ಹಾಗೆ. ನಮ್ಮ ಪಕ್ಷದ ಕಾರ್ಯಕ್ರಮದ ಕುರಿತು ಮಾತನಾಡುವುದಕ್ಕೆ ಅವರ್ಯಾರು? ಅವರು ಸರಿಯಾಗಿ ಇದ್ದಿದ್ದರೆ ಅವರನ್ನ ಜನರು ಯಾಕೆ ಮನೆಗೆ ಕಳಿಸುತ್ತಿದ್ದರು ಎಂದು ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ಹಾಗಾದರೆ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರ ಈ ವಾಗ್ದಾಳಿಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿ, ಅಧಿವೇಶನ ಬಿಟ್ಟು ಯಾತ್ರೆ ನಡೆಸುತ್ತಿರುವುದಕ್ಕೆ ಚಲುವರಾಯಸ್ವಾಮಿ ಅವರು ವ್ಯಂಗ್ಯವಾಡಿದ್ದರು. ಸಮಸ್ಯೆಗಳಿಗೆ ಅಧಿವೇಶನದಲ್ಲಿ ಚರ್ಚಿಸುವುದು ಬಿಟ್ಟು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂತರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು.