ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ತುಪ್ಪದೂರಿನಲ್ಲಿ ಹದಗೆಟ್ಟ ರಸ್ತೆಯಿಂದ ತುಂಬು ಗರ್ಭಿಣಿಯೊಬ್ಬರು ಅಂಬುಲೆನ್ಸ್ ಹತ್ತಲು ಅರ್ಧ ಕಿ.ಮೀ ನಡೆದುಕೊಂಡು ಬಂದಿದ್ದಾರೆ.
BIGG NEWS: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಸಿಗಲಿ ಎಂದು ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ
ಗರ್ಭಿಣಿ ಅಡಿವೆಮ್ಮಗೆ ವೈದ್ಯರು ಇಂದು ಹೆರಿಗೆಗೆ ದಿನಾಂಕ ನೀಡಿದ್ದರು. ಆದರೆ ರಸ್ತೆ ಹದಗೆಟ್ಟಿದ್ದರಿಂದ ಅಂಬುಲೆನ್ಸ್ ಗ್ರಾಮಕ್ಕೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಅಡಿವೆಮ್ಮ ಅರ್ಧ ಕಿ.ಮೀ ನಡೆದುಕೊಂಡು ಬಂದು ಅಂಬುಲೆನ್ಸ್ ಹತ್ತಿದ್ದಾರೆ.ತುಪ್ಪದೂರಿನಿಂದ ಕಲ್ಲೂರು ಸರ್ಕಾರಿ ಆಸ್ಪತ್ರೆಗೆ ತೆರಳಲು ಗರ್ಭಿಣಿ ಹರಸಾಹಸ ಪಟ್ಟಿದ್ದಾರೆ. ಗ್ರಾಮದಿಂದ ಸೇತುವೆವರೆಗೆ ಬೈಕ್ನಲ್ಲಿ ಬಂದರೂ ಈ ರಸ್ತೆಯಲ್ಲಿ ಅಪಾಯ ತಪ್ಪಿದ್ದಲ್ಲ. ಹೀಗಾಗಿ ನಡೆದುಕೊಂಡೇ ಬಂದು ಸೇತುವೆ ದಾಟಿ ಅಂಬುಲೆನ್ಸ್ ಹತ್ತಿದ್ದಾರೆ. ಇದರಿಂದಾಗಿ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.