ಶಿವಮೊಗ್ಗ: ಮಾರಿಕಾಂಬ ಜಾತ್ರೆಯ ಪ್ರಯುಕ್ತ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಕಾರ್ಯವು ನೆಹರು ಮೈದಾನದಲ್ಲಿ ನಡೆಯುತ್ತಿದೆ. ಟೆಂಡರ್ ಪಡೆದಿರೋದು ದುಬಾರಿ ದರವಾದರೂ, ಅಮ್ಯೂಸ್ಮೆಂಟ್ ಆಟಕ್ಕೆ ಯಾವುದೇ ದುಬಾರಿ ದರ ನಿಗದಿ ಪಡಿಸೋದಿಲ್ಲ ಎಂಬುದಾಗಿ ಅಮ್ಯೂಸ್ ಮೆಂಟ್ ಪಾರ್ಕ್ ಕಮಿಟಿಯ ಅಧ್ಯಕ್ಷ, ಉದ್ಯಮಿ ಹಾಗೂ ಟೆಂಡರ್ ಪಡೆದ ಲಿಂಗರಾಜು ಸ್ಪಷ್ಟ ಪಡಿಸಿದ್ದಾರೆ.
ಇಂದು ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗಣರಾಜ್ಯೋತ್ಸವವನ್ನು ನೆಹರೂ ಮೈದಾನದಲ್ಲಿ ಮಾಡುವುದಾಗಿ ಸಾಗರ ತಾಲ್ಲೂಕು ಆಡಳಿತ ತಿಳಿಸಿದೆ. ಅದಕ್ಕೆ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣದ ತಯಾರಿ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಬಿಡಲು ಒಪ್ಪಿಕೊಳ್ಳಲಾಗಿದೆ. ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನೆಹರೂ ಮೈದಾನದಲ್ಲಿ ನಡೆಸಲು ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದರು.

ಸಾಗರದ ಮಾರಿಕಾಂಬ ದೇವಿ ಜಾತ್ರೆಯ ಪ್ರಯುಕ್ತ ಅಮ್ಯೂಸ್ ಮೆಂಟ್ ಟೆಂಡರ್ ಅನ್ನು ತಾನು ಪಡೆದಿದ್ದೇನೆ. ಅದು ದುಬಾರಿಯಾಗಿದೆ. ಅದರಂತೆ ದುಬಾರಿ ಬೆಲೆಯನ್ನು ನಿಗದಿ ಪಡಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೇ ಅದು ಸತ್ಯಕ್ಕೆ ದೂರವಾದದ್ದು. ಸುಳ್ಳು ಮಾತ್ರವೇ. ಸಾಗರದ ಜನರು ಯಾರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಈ ಹಿಂದಿನ ಜಾತ್ರೆಗಿಂತ ಅಲ್ವ ಸ್ವಲ್ಪ ದರವನ್ನು ಮಾತ್ರವೇ ವ್ಯತ್ಯಾಸ ಮಾಡಿ ಇಡಲಾಗುತ್ತಿದೆ. ಅದರ ಹೊರತಾಗಿ ದುಬಾರಿ ದರವನ್ನು ಅಮ್ಯೂಸ್ ಮೆಂಟ್ ಪಾರ್ಕ್ ಆಟಕ್ಕೆ ಇಡೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಅಮ್ಯೂಸ್ ಮೆಂಟ್ ಪಾರ್ಕ್ ಟೆಂಡರ್ ಗಾಗಿ ಪೈಪೋಟಿ ನಡೆಸಲಾಗಿತ್ತು. ಅದರ ನಡುವೆ ಆ ಮಾರಿಕಾಂಬ ದೇವಿ ಕೃಪೆಯಿಂದ ತಮಗೆ ಸಿಕ್ಕಿದೆ. ಇದಕ್ಕಾಗಿ ದೇವಸ್ಥಾನದ ಕಮಿಟಿಗೆ, ನೆಹರೂ ಮೈದಾನದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಂತ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರಿಗೆ, ಇದಕ್ಕೆ ಕಾರಣವಾದಂತ ಎಲ್ಲರಿಗೂ ಧನ್ಯವಾದಗಳು, ಕೃತಜ್ಞತೆಗಳು ಎಂಬುದಾಗಿ ತಿಳಿಸಿದರು.
ವಕೀಲರಾದಂತ ಗೌತಮ್ ಮಾತನಾಡಿ, ಪ್ರತಿ ವರ್ಷದಂತೆ ಗಣರಾಜ್ಯೋತ್ಸವವು ನೆಹರೂ ಮೈದಾನದಲ್ಲೇ ನಡೆಯಲಿದೆ. ಮಾರಿಕಾಂಬ ಜಾತ್ರೆ ಪ್ರಯುಕ್ತ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಬಗೆ ಬಗೆಯ ಆಟಿಕೆಗಳು ಬಂದಿದ್ದಾವೆ. ಸಾಗರದ ಜನತೆಯು ಮಾರಿಕಾಂಬ ಜಾತ್ರೆಯ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಪ್ರೋತ್ಸಾಹಿಸುವಂತೆ ಕೋರಿದರು.
ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು…
‘ಅರಮನೆ ವೃದ್ಧಾಶ್ರಮ’ದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’
ನಾಳೆಯಿಂದ ‘ಸಿಗಂದೂರು ಜಾತ್ರಾ’ ಮಹೋತ್ಸವ: ‘ಭಕ್ತರ ಸ್ವಾಗತ’ಕ್ಕೆ ಸಕಲ ಸಿದ್ಧತೆ








