ನವದೆಹಲಿ: ಈಗಾಗಲೇ ಸತತವಾಗಿ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಲೇ ಇವೆ. ಈ ನಡುವೆಯೂ ಇದೀಗ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಅಮುಲ್ ( Amul ) ಹಾಲು, ಮೊಸಲಿನ ಬೆಲೆ 2 ರೂ ಹೆಚ್ಚಳ ಮಾಡಲಾಗಿದೆ.
BIGG NEWS : `BPL’ ಕಾರ್ಡ್ ಹೊಂದಿರುವ `SC-ST’ ಸಮುದಾಯಕ್ಕೆ 75 ಯುನಿಟ್ ಉಚಿತ ವಿದ್ಯುತ್ ನೊಂದಣಿಗೆ ಅರ್ಜಿ ಆಹ್ವಾನ
ಈ ಕುರಿತಂತೆ ಗುಜರಾತ್ ಸಹಕಾರಿ ಹಾಲು ಮಾರಾಟ ಫೆಡರೇಷನ್ ಲಿಮಿಟೆಡ್ ನ ( Gujarat Cooperative Milk Marketing Federation Limited ) ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಸೋಧಿ ಅವರು ಮಾಹಿತಿ ನೀಡಿದ್ದು, ಅಮುಲ್ ಗುಜರಾತ್ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಪೂರ್ಣ ಕೆನೆ ಹಾಲು ( cream milk ) ಮತ್ತು ಎಮ್ಮೆ ಹಾಲಿನ ( buffalo milk ) ಬೆಲೆಯನ್ನು ಪ್ರತಿ ಲೀಟರ್ ಗೆ 2 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
Amul has increased prices of full cream milk and buffalo milk by Rs 2 per litre in all states except Gujarat: RS Sodhi, MD, Gujarat Cooperative Milk Marketing Federation Limited pic.twitter.com/rhbBnVFEJp
— ANI (@ANI) October 15, 2022
ಇದಕ್ಕೂ ಮೊದಲು ಆಗಸ್ಟ್ ನಲ್ಲಿ ಅಮುಲ್ ನ ಚಿನ್ನ, ಶಕ್ತಿ ಮತ್ತು ತಾಜಾ ಹಾಲಿನ ಬ್ರಾಂಡ್ ಗಳ ಬೆಲೆಯನ್ನು ಪ್ರತಿ ಲೀಟರ್ ಗೆ ₹ 2 ರಷ್ಟು ಹೆಚ್ಚಿಸಿತ್ತು. ಇದೀಗ ಅಮುಲ್ ಹಾಲಿನ ದರವನ್ನು ಪ್ರತಿ ಲೀಟರ್ ಗೆ ₹ 2ರಷ್ಟು ಹೆಚ್ಚಿಸಿದೆ. ಈ ಮೂಲಕ ಈ ವರ್ಷ ಸತತ 3ನೇ ಬಾರಿಗೆ ಹಾಲಿನ ದರ ಹೆಚ್ಚಳ ಮಾಡಿದಂತೆ ಆಗಿದೆ.