ಕೆಎನ್ಎನ್ ಡಿಜಿಟಲ್ ಡೆಸ್ಕ್ : ಯುವತಿ, ಮಹಿಳೆಯರು ಮುಖದ ಕಾಂತಿಗೆ ಹೆಚ್ಚಿನ ಮಹತ್ವ, ಕಾಳಜಿ ನೀಡುತ್ತಾರೆ. ತ್ವಚೆಯ ಅಂದವನ್ನು ಕಾಪಾಡಲು ಅನೇಕ ಬಗೆಯ ಕ್ರೀಮ್ ಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿಯೇ ಸಿಗುವ ಬಾದಾಮ್ ಎಣ್ಣೆಯನ್ನು ಬಳಸುವ ಮೂಲಕ ಮುಖದ ಮೇಲೆ ಕಲೆ, ಗುಳ್ಳೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ವಿಧಾನಸಭಾ ಚುನಾವಣೆ : ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ ಮಾಜಿ ಸಚಿವ ‘ಕಾಗೋಡು ತಿಮ್ಮಪ್ಪ’
ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಬಾದಾಮಿ ಎಣ್ಣೆಯು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬಾದಾಮಿ ಎಣ್ಣೆಯನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳುನ್ನು ತಿಳಿಯಿರಿ.
ಕಲೆಗಳು ಮಾಯ
ರಾತ್ರಿ ಮಲಗುವ ಮುನ್ನ ಹತ್ತಿ ಉಂಡೆಯ ಸಹಾಯದಿಂದ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ, ಹಳೆಯ ಕಪ್ಪು ಕಲೆಗಳು ಮಸುಕಾಗಲು ಪ್ರಾರಂಭಿಸುತ್ತವೆ.ಬಾದಾಮಿ ಎಣ್ಣೆಯ ಆಂಟಿ-ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮುಖದ ಮೇಲಿನ ಸುಕ್ಕುಗಳ ನಿಯಂತ್ರಣ
ಬಾದಾಮಿ ಎಣ್ಣೆಯನ್ನು ತೆಂಗಿನೆಣ್ಣೆ ಮತ್ತು ಅಲೋವೆರಾ ಜೆಲ್ ನೊಂದಿಗೆ ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ಹಚ್ಚುವುದರಿಂದ ಮುಖದ ಮೇಲಿನ ಸುಕ್ಕುಗಳು ಕಡಿಮೆಯಾಗುತ್ತವೆ.
ಚರ್ಮದ ಪೋಷಣೆಗೆ ಸಹಾಯಕ
ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಬಾದಾಮಿ ಎಣ್ಣೆಯು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಬಾದಾಮಿ ಎಣ್ಣೆಯು ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ.
ಕಪ್ಪ ವರ್ತುಲ ನಿವಾರಣೆ
ರಾತ್ರಿ ಮಲಗುವ ಮುನ್ನ ಸ್ವಲ್ಪ ಬಾದಾಮಿ ಎಣ್ಣೆಯನ್ನು ರೋಸ್ ವಾಟರ್ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಹಚ್ಚುವುದರಿಂದ ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.
ಬಾದಾಮಿ ಎಣ್ಣೆಯನ್ನು ಬಳಸುವ ಸರಿಯಾದ ವಿಧಾನ ಹೇಗೆ?
ಬಾದಾಮಿ ಎಣ್ಣೆಯನ್ನು ಹಚ್ಚುವಾಗ, ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿರಬೇಕು. ಕೈಗಳು ಒಣಗಿದ ನಂತರ ಮಾತ್ರ ಅದನ್ನು ಬಳಸಿ ಮುಖಕ್ಕೆ ಹಚ್ಚಬೇಕು. ಹಚ್ಚಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಆದರೆ ಕಣ್ಣಿನ ಸುತ್ತ ಹಚ್ಚುವಾಗ ಜಾಗರೂಕರಾಗಿರಬೇಕು.
‘ಹಾಲು’ ಕುಡಿಯುವ ಮೊದ್ಲು ಮತ್ತು ನಂತ್ರ ಅಪ್ಪಿತಪ್ಪಿಯೂ ಈ ‘ಪದಾರ್ಥ’ ತಿನ್ಬೇಡಿ.!