ಚಿತ್ರದುರ್ಗ: ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ಇಲಾಖೆಯಿಂದ ಮಹತ್ವದ ಕ್ರಮ ವಹಿಸಲಾಗಿದೆ. ಬಾರ್, ರೆಸ್ಟೋರೆಂಟ್ ಸೇರಿ ಇತರೆ ಅನುಮತಿ ಪಡೆದ ಮದ್ಯದಂಗಡಿ ಹೊರತಾಗಿ ಬೇರೆಡೆ ಮದ್ಯ ಮಾರಾಟ ಕಾನೂನು ಬಾಹಿರ, ನಿಷೇಧ ಕೂಡ ಆಗಿದೆ. ಇದರ ನಡುವೆ ಇಲ್ಲೊಬ್ಬ ಭೂಪ ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಕೋರಿದ್ದಾನೆ. ಆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.
ಹೌದು.. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸನಾಯಕರಹಟ್ಟಿಯ ಹೆಚ್.ಸಿ ಚಂದ್ರಶೇಖರ್ ಎಂಬುವರು ಹಿರಿಯೂರು ತಾಲೂಕು ಅಬಕಾರಿ ನಿರೀಕ್ಷಿಕರಿಗೆ ಬರೆದಿರುವಂತ ಪತ್ರವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವಂತ ಪತ್ರದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ, ಬುರುಜನರೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಹೊಸನಾಯಕರಹಟ್ಟಿ ಗ್ರಾಮದಲ್ಲಿ ನಾನು ವಾಸಿಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಒಂದು ಚಿಲ್ಲರೆ ಅಂಗಿಡಯನ್ನು ತೆರೆಯುತ್ತಿರೋದಾಗಿ ತಿಳಿಸಿದ್ದಾರೆ.
ಇನ್ನೂ ಹೀಗೆ ತೆರೆಯುತ್ತಿರುವಂತ ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಲು ಉತ್ಸುಕನಾಗಿದ್ದೇನೆ. ದಯಮಾಡಿ ತಾವುಗಳು ನನ್ನ ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡುವಂತೆ ಕೋರಿದ್ದಾನೆ.
ಹೊಸನಾಯಕರಹಟ್ಟಿಯ ಯುವಕ ಹೆಚ್.ಸಿ ಚಂದ್ರಶೇಖರ್ ನೀಡಿರುವಂತ ಮನವಿಯನ್ನು ಹಿರಿಯೂರು ತಾಲೂಕು ಅಬಕಾರಿ ನಿರೀಕ್ಷಿಕರ ಕಚೇರಿಯು ಸ್ವೀಕರಿಸಿ, ಸ್ವೀಕೃತಿಯ ಮುದ್ರೆಯನ್ನು ಒತ್ತಿ ನೀಡಿದೆ. ಹಾಗಾದ್ರೇ ಚಿಲ್ಲರೆ ಅಂಗಡಿಯಲ್ಲಿಯೂ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯಿಂದ ಅನುಮತಿ ನೀಡಲಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
BIG Alert: ಪೋಷಕರೇ..! ನೀವು ಮಕ್ಕಳಿಗೆ ‘ಬಾಂಬೆ ಮಿಠಾಯಿ’ ಕೊಡಿಸ್ತಾ ಇದ್ದೀರಾ.? ಇಲ್ಲಿದೆ ‘ಶಾಕಿಂಗ್ ನ್ಯೂಸ್’
ALEART: ‘ಆ್ಯಂಟಿಬಯೋಟಿಕ್’ ಮಾತ್ರೆ ಸೇವನೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಮಹತ್ವದ ಎಚ್ಚರಿಕೆ!