ಬೆಂಗಳೂರು: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಶದ್ ಬೆಂಬಲಿಗರು ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ನಗದು, ಚಿನ್ನ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ.
ಇದೀಗ ಘಟನೆಗೆ ಪ್ರತಿಯಾಗಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಶದ್ ಪಿ ಎ ಮಜರ್ ದೂರು ನೀಡಿದ್ದಾರೆ. ಘಟನೆಗೂ ರಿಜ್ವಾನ್ ಗೂ ಯಾವುದೇ ಸಂಬಂಧವಿಲ್ಲ , ಶಾಸಕರ ಹೆಸರು ಕೆಡಿಸಲು ಮಹಿಳೆ ಈ ತರಹ ಆರೋಪ ಮಾಡಿದ್ದಾಳೆ ಎಂದು ಪಿ ಎ ಮಜರ್ ಹೇಳಿದ್ದಾರೆ. ಇದೀಗ ಘಟನೆಗೆ ಪ್ರತಿಯಾಗಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಶದ್ ಪಿ ಎ ಮಜರ್ ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಆರೋಪ ಮಾಡಲಾಗಿದೆ. ಹಾಗಾಗಿ ಸೋನಾಂ ಮಿಶ್ರ ವಿರುದ್ಧ ನಾವೇ ದೂರು ಕೊಟ್ಟಿದ್ದೇವೆ ಎಂದಿದ್ದಾರೆ.
ಘಟನೆ ಹಿನ್ನೆಲೆ
ಬೆಂಗಳೂರಿನ ಪುಲಿಕೇಶಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೆಹಲಿ ಮೂಲದ ಸೋನಾಂ ಮಿಶ್ರ ಎನ್ನುವವರು ಹರ್ಮಲ್ ರಿಗಾಲಿಯ ಅಪಾರ್ಟ್ಮೆಂಟ್ನಲ್ಲಿ ವಾಸ ಮಾಡುತ್ತಿದ್ದಾರೆ. ಇದೇ ವೇಳೆ ಈ ಮನೆ ನಮ್ಮದ್ದು ಅಂತ ಹೇಳಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಶದ್ ಅವರ ಬೆಂಬಲಿಗರು ಆಗಮಿಸಿ ಧಮ್ಕಿ ಹಾಕಿ, ಮನೆಯಲ್ಲಿದ್ದ ನಗ, ನಗದು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಪುಲಿಕೇಶಿ ನಗರ ಪೋಲಿಸ್ ಠಾಣೆಗೆ ದೂರು ನೀಡಿದರು ಕೂಡ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಂಡಿಲ್ಲ ಅಂತ ಕಂಡು ಬಂದಿದೆ. ಹೀಗಾಗಿ ದೂರದಾರ ಮಹಿಳೆ ಬೆಂಗಳೂರು ಪೋಲಿಸ್ ಕಮಿಶನರ್ ಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿತ್ತು.
‘ಮಾಜಿ ಸಿಎಂ ಕುಮಾರಸ್ವಾಮಿ’ಯಿಂದರೇ, ತಮ್ಮ ಪುತ್ರನಿಗೆ ‘ಕುಮಾರಸ್ವಾಮಿ’ ಎಂದು ಹೆಸರಿಟ್ಟ ಮಳವಳ್ಳಿ ದಂಪತಿಗಳು
ಉಡುಪಿಯಲ್ಲಿ10 ಸಾವಿರ ಲಂಚ ಪಡೆದ ‘ಗ್ರಾಮ ಲೆಕ್ಕಾಧಿಕಾರಿ’ ಲೋಕಾಯುಕ್ತ ಬಲೆಗೆ