ಬೆಂಗಳೂರು: ಭ್ರಷ್ಟ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಇಲಾಖೆಗಳು, ಎಲ್ಲಾ ನಿಗಮಗಳು ನಿಷ್ಕ್ರೀಯವಾಗಿವೆ. ಬೆಂಗಳೂರು ಈಗ ರಸ್ತೆಗುಂಡಿಗಳ ಸಾಮ್ರಾಜ್ಯ, ನಿತ್ಯ ಲಕ್ಷಾಂತರ ಜನ ಓಡಾಡುವ ಮೆಜೆಸ್ಟಿಕ್ ಕೂಡ ನಿರ್ವಹಣೆ ಇಲ್ಲದೆ ನರಕಸದೃಶ್ಯವಾಗಿದೆ. ಬಸ್ಸುಗಳ ನಿರ್ವಹಣೆಯಷ್ಟೇ ಅಲ್ಲ, ಮೆಜೆಸ್ಟಿಕ್ ಬಸ್ ನಿಲ್ದಾಣದ ನಿರ್ವಹಣೆಯಲ್ಲೂ ಬಿಎಂಟಿಸಿ ನಿರ್ಲಕ್ಷ್ಯವಹಿಸಿದೆ ಎಂದು ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಭ್ರಷ್ಟ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಇಲಾಖೆಗಳು, ಎಲ್ಲಾ ನಿಗಮಗಳು ನಿಷ್ಕ್ರೀಯವಾಗಿವೆ.
ಬೆಂಗಳೂರು ಈಗ ರಸ್ತೆಗುಂಡಿಗಳ ಸಾಮ್ರಾಜ್ಯ, ನಿತ್ಯ ಲಕ್ಷಾಂತರ ಜನ ಓಡಾಡುವ ಮೆಜೆಸ್ಟಿಕ್ ಕೂಡ ನಿರ್ವಹಣೆ ಇಲ್ಲದೆ ನರಕಸದೃಶ್ಯವಾಗಿದೆ.
ಬಸ್ಸುಗಳ ನಿರ್ವಹಣೆಯಷ್ಟೇ ಅಲ್ಲ, ಮೆಜೆಸ್ಟಿಕ್ ಬಸ್ ನಿಲ್ದಾಣದ ನಿರ್ವಹಣೆಯಲ್ಲೂ ಬಿಎಂಟಿಸಿ ನಿರ್ಲಕ್ಷ್ಯವಹಿಸಿದೆ. pic.twitter.com/KFG2F0iMj6
— Karnataka Congress (@INCKarnataka) December 9, 2022
ಈ ಕುರಿತಂತೆ ಟ್ವಿಟ್ ಮಾಡಿದ್ದು, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ಮ್ಯಾನೇಜರ್ ಹುದ್ದೆಗೆ 65 ಲಕ್ಷ! ಬಿಜೆಪಿ ಸರ್ಕಾರ ಪ್ರಮಾಣಿಕವಾಗಿದ್ದರೆ ವಿಧಾನಸೌಧದ ಆವರಣದಲ್ಲೇ ಭ್ರಷ್ಟರಿಗೆ ಹುದ್ದೆ ಮಾರಾಟ ಮಾಡುವ ಧೈರ್ಯ ಬರಲು ಹೇಗೆ ಸಾಧ್ಯ. ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಸಿಎನ್ ಅಶ್ವತ್ಥನಾರಾಯಣ ಅವರು ಕ್ಯಾಶಲ್ಲೇ ಅಭಿವೃದ್ಧಿಯಾಗಲು ಈ ಪಟಾಲಂನ್ನು ಮುಂದೆ ಬಿಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದೆ.
ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ಮ್ಯಾನೇಜರ್ ಹುದ್ದೆಗೆ 65 ಲಕ್ಷ!@BJP4Karnataka ಸರ್ಕಾರ ಪ್ರಮಾಣಿಕವಾಗಿದ್ದರೆ ವಿಧಾನಸೌಧದ ಆವರಣದಲ್ಲೇ ಭ್ರಷ್ಟರಿಗೆ ಹುದ್ದೆ ಮಾರಾಟ ಮಾಡುವ ಧೈರ್ಯ ಬರಲು ಹೇಗೆ ಸಾಧ್ಯ.
ಕೌಶಲ್ಯಾಭಿವೃದ್ಧಿ ಸಚಿವರಾದ @drashwathcn ಅವರು ಕ್ಯಾಶಲ್ಲೇ ಅಭಿವೃದ್ಧಿಯಾಗಲು ಈ ಪಟಾಲಂನ್ನು ಮುಂದೆ ಬಿಟ್ಟಿದ್ದಾರೆಯೇ? pic.twitter.com/1ck2w03Ba1
— Karnataka Congress (@INCKarnataka) December 9, 2022
ಬಡ ಮಕ್ಕಳು ಶಿಕ್ಷಣದಿಂದ ದೂರವಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸುಲಿಗೆ ಎಗ್ಗಿಲ್ಲದೆ ಸಾಗಿದೆ. ಬಿಬಿಎಂಪಿ ಕಾಲೇಜಿನಲ್ಲಿ ಸುಲಿಗೆ ನಡೆಯುತ್ತಿದ್ದರೂ ಸರ್ಕಾರದ ಗಮನಕ್ಕೆ ಬರಲಿಲ್ಲವೇ? ಬಿಬಿಎಂಪಿ ಕಮೀಷನ್ ಅವರೇ, ಇಂತಹ ಬೇಕಾಬಿಟ್ಟಿ ಸುಲಿಗೆಯನ್ನು ನಿಯಂತ್ರಿಸಲು ಕ್ರಮವಹಿಸಿ ಎಂದಿದೆ.
ಬಡ ಮಕ್ಕಳು ಶಿಕ್ಷಣದಿಂದ ದೂರವಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ.
ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸುಲಿಗೆ ಎಗ್ಗಿಲ್ಲದೆ ಸಾಗಿದೆ.ಬಿಬಿಎಂಪಿ ಕಾಲೇಜಿನಲ್ಲಿ ಸುಲಿಗೆ ನಡೆಯುತ್ತಿದ್ದರೂ ಸರ್ಕಾರದ ಗಮನಕ್ಕೆ ಬರಲಿಲ್ಲವೇ?@BBMPCOMM ಅವರೇ, ಇಂತಹ ಬೇಕಾಬಿಟ್ಟಿ ಸುಲಿಗೆಯನ್ನು ನಿಯಂತ್ರಿಸಲು ಕ್ರಮವಹಿಸಿ. pic.twitter.com/F4rgzDaGGX
— Karnataka Congress (@INCKarnataka) December 9, 2022
ವಿಧಾನಸೌಧ ವ್ಯಾಪಾರಸೌಧವಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ. ವಿಧಾನಸೌಧದ ಆವರಣದಲ್ಲೇ ಸರ್ಕಾರಿ ಹುದ್ದೆ ಮಾರಾಟ ಮಾಡಲಾಗುತ್ತಿದೆ. ಬೊಮ್ಮಾಯಿ ಅವರೇ, ವಿಧಾನಸೌಧದಲ್ಲೇ ರಾಜಾರೋಷವಾಗಿ ಹುದ್ದೆ ಮಾರಾಟ ನಡೆಯುತ್ತಿದ್ದರೂ ತಮ್ಮ ‘ಪ್ರಾಮಾಣಿಕ ಸರ್ಕಾರ’ದ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಮಾರಾಟದ ಏಜೆಂಟರನ್ನು ನೀವೇ ಸಾಕಿಕೊಂಡಿದ್ದೀರಾ? ಎಂದು ಕಿಡಿಕಾರಿದೆ.
ವಿಧಾನಸೌಧ ವ್ಯಾಪಾರಸೌಧವಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ.
ವಿಧಾನಸೌಧದ ಆವರಣದಲ್ಲೇ ಸರ್ಕಾರಿ ಹುದ್ದೆ ಮಾರಾಟ ಮಾಡಲಾಗುತ್ತಿದೆ.@BSBommai ಅವರೇ, ವಿಧಾನಸೌಧದಲ್ಲೇ ರಾಜಾರೋಷವಾಗಿ ಹುದ್ದೆ ಮಾರಾಟ ನಡೆಯುತ್ತಿದ್ದರೂ ತಮ್ಮ 'ಪ್ರಾಮಾಣಿಕ ಸರ್ಕಾರ'ದ ಕಣ್ಣಿಗೆ ಬಿದ್ದಿಲ್ಲವೇ?ಅಥವಾ ಮಾರಾಟದ ಏಜೆಂಟರನ್ನು ನೀವೇ ಸಾಕಿಕೊಂಡಿದ್ದೀರಾ? pic.twitter.com/DQnW5pe9KH
— Karnataka Congress (@INCKarnataka) December 9, 2022
ಸುಲಿಗೆ ಸರ್ಕಾರ ಆಡಳಿತದಲ್ಲಿ ಇರುವಾಗ ಭ್ರಷ್ಟ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದಾಗಿದೆ. ವಿಧಾನಸೌಧದಿಂದ ಹಿಡಿದು ಹಾದಿ ಬೀದಿಯಲ್ಲೂ ಲಂಚಾವತಾರ ಸರಾಗವಾಗಿ ಸಾಗಿದೆ. ಲಂಚ ಪಡೆಯುವ ವೇಳೆ ಮಾಧ್ಯಮಗಳನ್ನು ಕಂಡು ಓಡುತ್ತಿರುವ ಈ RTO ಅಧಿಕಾರಿ ಬಿಜೆಪಿ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾನೆ ಎಂದು ಗುಡುಗಿದೆ.
ಸುಲಿಗೆ ಸರ್ಕಾರ ಆಡಳಿತದಲ್ಲಿ ಇರುವಾಗ ಭ್ರಷ್ಟ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದಾಗಿದೆ.
ವಿಧಾನಸೌಧದಿಂದ ಹಿಡಿದು ಹಾದಿ ಬೀದಿಯಲ್ಲೂ ಲಂಚಾವತಾರ ಸರಾಗವಾಗಿ ಸಾಗಿದೆ.
ಲಂಚ ಪಡೆಯುವ ವೇಳೆ ಮಾಧ್ಯಮಗಳನ್ನು ಕಂಡು ಓಡುತ್ತಿರುವ ಈ RTO ಅಧಿಕಾರಿ @BJP4Karnataka ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾನೆ! pic.twitter.com/rMV9ObWBr6
— Karnataka Congress (@INCKarnataka) December 9, 2022