ನವದೆಹಲಿ : ನೀವು ಎಲ್ಐಸಿ ಗ್ರಾಹಕರಾಗಿದ್ರೆ, ಈ ಬಗ್ಗೆ ಜಾಗರೂಕರಾಗಿರಿ. ಇಲ್ಲದಿದ್ದರೆ, ನೀವು ದೊಡ್ಡ ತೊಂದರೆಗಳನ್ನ ಎದುರಿಸಬೇಕಾಗುತ್ತದೆ. ಆನ್ಲೈನ್ ವಹಿವಾಟಿನ ಪ್ರವೃತ್ತಿಯನ್ನ ಗಮನದಲ್ಲಿಟ್ಟುಕೊಂಡು, ವಂಚಕರು ಹೆಚ್ಚಾಗುತ್ತಿದ್ದು, ಅವರು ಹೊಸ ರೀತಿಯಲ್ಲಿ ವಂಚನೆಗಳನ್ನ ಮಾಡುತ್ತಿದ್ದಾರೆ. ಈಗ ಎಲ್ಐಸಿ ಗ್ರಾಹಕರನ್ನ ಗುರಿಯಾಗಿಸಲಾಗಿದೆ. ಅವ್ರು ಕೆವೈಸಿಯನ್ನ ನವೀಕರಿಸುವಂತೆ ಸಂದೇಶಗಳನ್ನ ಕಳುಹಿಸುವ ಮೂಲಕ ವಿವರಗಳನ್ನ ಸಂಗ್ರಹಿಸಿ, ವಂಚಿಸುತ್ತಿದ್ದಾರೆ.
ಭಾರತೀಯ ಜೀವ ವಿಮಾ ನಿಗಮ (LIC) ಸೈಬರ್ ಅಪರಾಧಿಗಳು, ಗ್ರಾಹಕರಿಗೆ ನಕಲಿ ಸಂದೇಶಗಳನ್ನ ಕಳುಹಿಸುತ್ತಿದ್ದಾರೆ ಎಂದು ಸಾರ್ವಜನಿಕ ಅಧಿಸೂಚನೆ ಹೊರಡಿಸಿದೆ. ಸಂದೇಶದಲ್ಲಿ, ಅವರು ಕೆವೈಸಿಯನ್ನ ತಕ್ಷಣವೇ ಪೂರ್ಣಗೊಳಿಸುವಂತೆ, ಇಲ್ಲದಿದ್ದರೆ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ವಾಸ್ತವವಾಗಿ, ಎಲ್ಐಸಿ ಎಂದಿಗೂ ಗ್ರಾಹಕರಿಗೆ ಅಂತಹ ಸಂದೇಶಗಳನ್ನ ಕಳುಹಿಸುವುದಿಲ್ಲ. ಅಲ್ಲದೇ, ಕೆವೈಸಿಯನ್ನ ನವೀಕರಿಸದಿದ್ದರೇ ಯಾವುದೇ ದಂಡ ವಿಧಿಸೋಲ್ಲ ಎಂದಿದೆ.
ಹಾಗಾಗಿ ಗ್ರಾಹಕರಿಗೆ ಎಚ್ಚರಿಕೆ ನೀಡಿರುವ ಎಲ್ಐಸಿ, ಅಂತಹ ಸಂದೇಶಗಳನ್ನ ನಂಬಬೇಡಿ ಎಂದಿದೆ. ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಮತ್ತು ಅಂತಹ ಅಪಾಯಕಾರಿ ಲಿಂಕ್ ಕ್ಲಿಕ್ ಮಾಡದಂತೆ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಬಳಕೆದಾರರು ಜಾಗರೂಕರಾಗಿರಲು ಮತ್ತು ಅಂತಹ ಸಂದೇಶಗಳಿಂದ ದೂರವಿರಲು ಸೂಚಿಸಲಾಗಿದೆ. ನಿಮಗೆ ಸಂದೇಹವಿದ್ದರೆ, ಹತ್ತಿರದ ಶಾಖೆಗೆ ಭೇಟಿ ನೀಡುವಂತೆ ತಿಳಿಸಿದೆ.
Good News : ಹೊಸ ವರ್ಷಕ್ಕೆ ಬಡವರಿಗೆ ಕೇಂದ್ರ ಸರ್ಕಾರದಿಂದ ಗಿಫ್ಟ್ : 1 ವರ್ಷ ಉಚಿತ ಪಡಿತರ ಘೋಷಣೆ
BIGG NEWS : ಕೊರೊನಾ ಭೀತಿ ಹಿನ್ನೆಲೆ : ಇಂದು ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಮಹತ್ವದ ಸಭೆ
ಸಾರ್ವನಿಕರಿಗೆ ಬಿಗ್ ಶಾಕ್ ; ಪೋನ್ ಸುಂಕ ಹೆಚ್ಚಳ, ಮೊಬೈಲ್ ಈಗ ಮತ್ತಷ್ಟು ದುಬಾರಿ