ಹುಬ್ಬಳ್ಳಿ : ಅಪ್ರಾಪ್ತ ಮಕ್ಕಳ ಕೈಗೆ ವಾಹನ ಕೊಡುವ ಪೋಷಕರೇ ಎಚ್ಚರ, ಮಗ ಬೈಕ್ ವ್ಹೀಲಿಂಗ್ ಮಾಡಿದಕ್ಕೆ ತಂದಗೆ ಬರೋಬ್ಬರಿ 25,000 ರೂ. ದಂಡ ವಿಧಿಸಲಾಗಿದೆ.
ಹೌದು, ಹುಬ್ಬಳ್ಳಿಯ ಉಣಕಲ್ ಹತ್ತಿರ ಅಪ್ರಾಪ್ತನೊಬ್ಬ ಬೈಕ್ ವೀಲಿಂಗ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಂದೆಗೆ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ.
ಹಳೇ ಹುಬ್ಬಳ್ಳಿಯ ಅಬ್ದುಲ್ ರಸೂಲ್ಖಾನ್ ಟಿನ್ವಾಲೆ ಅವರ ಮಗ ಉಣಕಲ್ ಹತ್ತಿರ ಬೈಕ್ ವೀಲಿಂಗ್ ಮಾಡಿದ್ದ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ಉತ್ತರ ಸಂಚಾರ ಠಾಣೆ ಪೊಲೀಸರು ಬೈಕನ್ನು ವಶಪಡಿಸಿಕೊಂಡಿದ್ದರು. ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ಆರೋಪದಡಿ ತಂದೆಗೆ 25 ಸಾವಿರ ದಂಡ ವಿಧಿಸಿದ್ದಾರೆ.