Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ವಿಷಾ ಶರ್ಮಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆರೋಪಿ ಪತಿ ಶರಣಾಗತಿ; 2ನೇ ಬಾರಿ ಶವಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ!

ALERT : ಕೊರೋನಾ ಬಳಿಕ ರಾಜ್ಯದಲ್ಲಿ `ಎಬೋಲಾ’ ಹೈ ಅಲರ್ಟ್ : ಚಿಕಿತ್ಸೆಗಾಗಿ ಸಿದ್ಧಗೊಂಡಿದೆ ಆಸ್ಪತ್ರೆ,ಆಂಬುಲೆನ್ಸ್!

ನುಸುಳುವಿಕೆಗೆ ಶಾಶ್ವತ ಬ್ರೇಕ್: ಪಾಕಿಸ್ತಾನ ಮತ್ತು ಬಾಂಗ್ಲಾ ಗಡಿಯಲ್ಲಿ ‘ಸ್ಮಾರ್ಟ್ ಬಾರ್ಡರ್’ ವ್ಯವಸ್ಥೆ ಜಾರಿ : ಅಮಿತ್ ಶಾ ಘೋಷಣೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಕೊರೋನಾ ಬಳಿಕ ರಾಜ್ಯದಲ್ಲಿ `ಎಬೋಲಾ’ ಹೈ ಅಲರ್ಟ್ : ಚಿಕಿತ್ಸೆಗಾಗಿ ಸಿದ್ಧಗೊಂಡಿದೆ ಆಸ್ಪತ್ರೆ,ಆಂಬುಲೆನ್ಸ್!
KARNATAKA

ALERT : ಕೊರೋನಾ ಬಳಿಕ ರಾಜ್ಯದಲ್ಲಿ `ಎಬೋಲಾ’ ಹೈ ಅಲರ್ಟ್ : ಚಿಕಿತ್ಸೆಗಾಗಿ ಸಿದ್ಧಗೊಂಡಿದೆ ಆಸ್ಪತ್ರೆ,ಆಂಬುಲೆನ್ಸ್!

By kannadanewsnow57

ಬೆಂಗಳೂರು: ಜಾಗತಿಕವಾಗಿ ಕರೊನಾ ಆತಂಕ ತಗ್ಗಿದ ಬೆನ್ನಲ್ಲೇ, ಇದೀಗ ದೇಶದಲ್ಲಿ ‘ಎಬೋಲಾ’ ವೈರಸ್ ಭೀತಿ ಎದುರಾಗಿದೆ. ಎಬೋಲಾ ಸಾಂಕ್ರಾಮಿಕ ರೋಗದ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಎಸ್‌ಒಪಿ (SOP) ಬಿಡುಗಡೆ ಮಾಡಿದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಸರ್ಕಾರವು ಅಲರ್ಟ್ ಆಗಿದ್ದು ತೀವ್ರ ಜಾಗ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಚಿಕಿತ್ಸೆಗೆ 4 ಆಸ್ಪತ್ರೆಗಳು ಮತ್ತು ಐಸೊಲೇಶನ್ ಕೇಂದ್ರಗಳು ಸಿದ್ಧ
ರಾಜ್ಯದಲ್ಲಿ ಎಬೋಲಾ ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆಯು ಸಂಪೂರ್ಣವಾಗಿ ಸಜ್ಜಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಪ್ರಮುಖ 4 ಆಸ್ಪತ್ರೆಗಳನ್ನು ಎಬೋಲಾ ಚಿಕಿತ್ಸಾ ಕೇಂದ್ರಗಳಾಗಿ ಹಾಗೂ ಐಸೊಲೇಶನ್ ಕೇಂದ್ರಗಳಾಗಿ ಗುರುತಿಸಿ ಸರ್ಕಾರ ಆದೇಶ ಹೊರಡಿಸಿದೆ:

ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ, ಬೆಂಗಳೂರು (ಎಬೋಲಾ ಐಸೊಲೇಶನ್ ಕೇಂದ್ರ)

ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಬೆಂಗಳೂರು 3. ಶ್ರೀ ನಿವಾಸ ಪೋರ್ಟ್ ಆಸ್ಪತ್ರೆ, ಮಂಗಳೂರು (ಎಬೋಲಾ ಐಸೊಲೇಶನ್ ಕೇಂದ್ರ)

ವೆನ್ಲಾಕ್ ಆಸ್ಪತ್ರೆ, ಮಂಗಳೂರು

ಈ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಪಿಪಿಇ ಕಿಟ್‌ಗಳು, ಸೂಕ್ತ ಔಷಧಗಳು ಹಾಗೂ ಪ್ರಯೋಗಾಲಯ (ಲ್ಯಾಬ್) ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ತುರ್ತು ಪರಿಸ್ಥಿತಿಗಾಗಿ ‘ರಾಪಿಡ್ ರೆಸ್ಪಾನ್ಸ್ ಟೀಮ್’ (ತ್ವರಿತ ಪ್ರತಿಕ್ರಿಯಾ ತಂಡ) ಅನ್ನು ಸಜ್ಜುಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

21 ದಿನಗಳ ಕಡ್ಡಾಯ ಕ್ವಾರಂಟೈನ್
ಕಾಂಗೋ ಮತ್ತು ಉಗಾಂಡ ದೇಶಗಳಲ್ಲಿ ಎಬೋಲಾ ರೋಗ ತೀವ್ರವಾಗಿ ಹರಡುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು (WHO) ಇದನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಎಬೋಲಾ ಪೀಡಿತ ದೇಶಗಳಿಗೆ ಇತ್ತೀಚೆಗೆ ಪ್ರಯಾಣ ಬೆಳೆಸಿ ಭಾರತಕ್ಕೆ ಮರಳುವ ಪ್ರಯಾಣಿಕರನ್ನು 21 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡಿ ಆರೋಗ್ಯ ಮೇಲ್ವಿಚಾರಣೆ ನಡೆಸಲಾಗುವುದು.

ಪ್ರಯಾಣಿಕರಲ್ಲಿ ಎಬೋಲಾ ರೋಗದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ವರದಿ ಮಾಡಬೇಕು. ಅಂಥವರನ್ನು ಕ್ಷಿಪ್ರ ಪ್ರತಿಕ್ರಿಯಾ ತಂಡವು ತಕ್ಷಣವೇ ಸರ್ವೇಕ್ಷಣೆ ಒಳಪಡಿಸಲಿದೆ.

ಸಂಶಯಾಸ್ಪದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಪ್ರತ್ಯೇಕ ಆಂಬುಲೆನ್ಸ್ ಸೇವೆಯನ್ನು ಸಿದ್ಧಪಡಿಸಲಾಗಿದೆ.

ಶಂಕಿತ ರೋಗಿಗಳ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆಯ (NIV) ಮೂಲಕ ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಿಕೊಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ರೋಗದ ಪ್ರಮುಖ ಲಕ್ಷಣಗಳು ಯಾವುವು?
ಎಬೋಲಾ ತೀವ್ರ ಸ್ವರೂಪದ ವೈರಾಣು ಸೋಂಕಾಗಿದ್ದು, ಕೆಳಗಿನ ಲಕ್ಷಣಗಳು ಪ್ರಮುಖವಾಗಿ ಕಂಡುಬರುತ್ತವೆ:

ಜ್ವರ ಮತ್ತು ತಲೆನೋವು

ಸ್ನಾಯು ನೋವು ಹಾಗೂ ಗಂಟಲು ನೋವು

ವಾಂತಿ ಮತ್ತು ತೀವ್ರ ಅತಿಸಾರ (ಭೇದಿ)

ಹೊಟ್ಟೆ ನೋವು

ಚರ್ಮದ ಮೇಲೆ ದದ್ದುಗಳು ಏಳುವುದು ಹಾಗೂ ಕಣ್ಣುಗಳು ಕೆಂಪಾಗುವುದು.

ಯಾರಿಗೆ ಅಪಾಯ ಹೆಚ್ಚು? (ಸೋಂಕು ಹರಡುವುದು ಹೇಗೆ?)
ಎಬೋಲಾ ಸೋಂಕು ಗಾಳಿಯ ಮೂಲಕ ಹರಡುವುದಿಲ್ಲ, ಬದಲಿಗೆ ನೇರ ಸಂಪರ್ಕದಿಂದ ಹರಡುತ್ತದೆ:

ಶಂಕಿತ ಹಾಗೂ ಸೋಂಕಿತ ವ್ಯಕ್ತಿಗಳ ರಕ್ತ, ಅಂಗಗಳು ಮತ್ತು ದೇಹದ ಇತರ ದ್ರವಗಳೊಂದಿಗೆ (ಲಾಲಾರಸ, ಬೆವರು ಇತ್ಯಾದಿ) ನೇರ ಸಂಪರ್ಕ ಸಾಧಿಸಿದರೆ ಸೋಂಕು ಹರಡುತ್ತದೆ.

ಸೋಂಕಿತರು ಬಳಸಿದ ಹಾಸಿಗೆ, ಬಟ್ಟೆ ಹಾಗೂ ಸಿರಿಂಜ್‌ನಂತಹ ಕಲುಷಿತ ವಸ್ತುಗಳ ಬಳಕೆಯಿಂದಲೂ ಇದು ಬರಬಹುದು.

ಹೀಗಾಗಿ, ಸೋಂಕಿತ ರೋಗಿಗಳ ಆರೈಕೆ ಮಾಡುವ ಆರೋಗ್ಯ ಸಿಬ್ಬಂದಿ, ರೋಗಿಯ ಕುಟುಂಬದ ಸದಸ್ಯರು ಹಾಗೂ ಅವರ ನಿಕಟ ಸಂಪರ್ಕದಲ್ಲಿ ಇರುವವರಿಗೆ ಈ ರೋಗದ ಅಪಾಯ ಅತ್ಯಂತ ಹೆಚ್ಚಾಗಿರುತ್ತದೆ.

'Ebola' high alert in the state: Hospital ALERT: After Corona ambulance ready for treatment!
Share. Facebook Twitter LinkedIn WhatsApp Email

Related Posts

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

2 Mins Read

ಇಂದು ಬೆಂಗಳೂರಿನ ಆನೇಕಲ್ ನಲ್ಲಿ ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

1 Min Read

BIG NEWS : ಅನುಕಂಪದ ಆಧಾರದ ನೇಮಕಾತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ | Government of Karnataka

2 Mins Read
Recent News

ಟ್ವಿಷಾ ಶರ್ಮಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆರೋಪಿ ಪತಿ ಶರಣಾಗತಿ; 2ನೇ ಬಾರಿ ಶವಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ!

ALERT : ಕೊರೋನಾ ಬಳಿಕ ರಾಜ್ಯದಲ್ಲಿ `ಎಬೋಲಾ’ ಹೈ ಅಲರ್ಟ್ : ಚಿಕಿತ್ಸೆಗಾಗಿ ಸಿದ್ಧಗೊಂಡಿದೆ ಆಸ್ಪತ್ರೆ,ಆಂಬುಲೆನ್ಸ್!

ನುಸುಳುವಿಕೆಗೆ ಶಾಶ್ವತ ಬ್ರೇಕ್: ಪಾಕಿಸ್ತಾನ ಮತ್ತು ಬಾಂಗ್ಲಾ ಗಡಿಯಲ್ಲಿ ‘ಸ್ಮಾರ್ಟ್ ಬಾರ್ಡರ್’ ವ್ಯವಸ್ಥೆ ಜಾರಿ : ಅಮಿತ್ ಶಾ ಘೋಷಣೆ!

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

State News
KARNATAKA

ALERT : ಕೊರೋನಾ ಬಳಿಕ ರಾಜ್ಯದಲ್ಲಿ `ಎಬೋಲಾ’ ಹೈ ಅಲರ್ಟ್ : ಚಿಕಿತ್ಸೆಗಾಗಿ ಸಿದ್ಧಗೊಂಡಿದೆ ಆಸ್ಪತ್ರೆ,ಆಂಬುಲೆನ್ಸ್!

By kannadanewsnow57 KARNATAKA 2 Mins Read

ಬೆಂಗಳೂರು: ಜಾಗತಿಕವಾಗಿ ಕರೊನಾ ಆತಂಕ ತಗ್ಗಿದ ಬೆನ್ನಲ್ಲೇ, ಇದೀಗ ದೇಶದಲ್ಲಿ ‘ಎಬೋಲಾ’ ವೈರಸ್ ಭೀತಿ ಎದುರಾಗಿದೆ. ಎಬೋಲಾ ಸಾಂಕ್ರಾಮಿಕ ರೋಗದ…

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

ಇಂದು ಬೆಂಗಳೂರಿನ ಆನೇಕಲ್ ನಲ್ಲಿ ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

BIG NEWS : ಅನುಕಂಪದ ಆಧಾರದ ನೇಮಕಾತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ | Government of Karnataka

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.