ಅಮೆರಿಕ: ಡಿಸೆಂಬರ್ 31 ರಂದು ಯುಎಸ್ ವಿಮಾನ ನಿಲ್ದಾಣದಲ್ಲಿ ಏರ್ಲೈನ್ ಉದ್ಯೋಗಿಯೊಬ್ಬರು ವಿಮಾನದ ಇಂಜಿನ್ಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಲಬಾಮಾದ ಮಾಂಟ್ಗೊಮೆರಿ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಅಮೆರಿಕನ್ ಏರ್ಲೈನ್ಸ್ ಅಂಗಸಂಸ್ಥೆ ಪೀಡ್ಮಾಂಟ್ಗೆ ಸಂಬಂಧಿಸಿದ ಕೆಲಸಗಾರ ವಿಮಾನದ ಎಂಜಿನ್ಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಯುಎಸ್ ಸರ್ಕಾರದ ತನಿಖಾ ಸಂಸ್ಥೆಯಾದ ನ್ಯಾಷನಲ್ ಟ್ರಾನ್ಸ್ಪೋರ್ಟೇಶನ್ ಸೇಫ್ಟಿ ಬೋರ್ಡ್ ಹೇಳಿದೆ.
ಅಲಬಾಮಾ ಯುಎಸ್ಎಯ ಮಾಂಟ್ಗೊಮೆರಿ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಉದ್ಯೋಗಿ ರಾಂಪ್ನಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಎಂಜಿನ್ ಚಾಲನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಇದನ್ನು ಮತ್ತೊಂದು ಅಮೇರಿಕನ್ ಏರ್ಲೈನ್ಸ್ ಅಂಗಸಂಸ್ಥೆಯಾದ ಎನ್ವಾಯ್ ಏರ್ ನಿರ್ವಹಿಸುತ್ತಿತ್ತು. ಕೆಲಸಗಾರನ ಗುರುತನ್ನು ಇನ್ನೂ ತಿಳಿಸಲಾಗಿಲ್ಲ.