BREAKING NEWS: ಆಸ್ಟ್ರೇಲಿಯಾದಲ್ಲಿ ಹಾರಾಟದ ವೇಳೆ 2 ಹೆಲಿಕಾಪ್ಟರ್‌ಗಳ ಮಧ್ಯೆ ಡಿಕ್ಕಿ… ನಾಲ್ವರು ಸಾವು, ಮೂವರ ಸ್ಥಿತಿ ಚಿಂತಾಜನಕ

ಸಿಡ್ನಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಪ್ರವಾಸೋದ್ಯಮ ತಾಣದಲ್ಲಿ ಇಂದು ಹಾರಾಟದ ವೇಳೆ ಎರಡು ಹೆಲಿಕಾಪ್ಟರ್‌ಗಳ ನಡುವೆ ಪರಸ್ಪರ ಡಿಕ್ಕಿಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ, ಘಟನೆಯಲ್ಲಿ ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಠವಶಾತ್‌ ಒಂದು ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ವಿಮಾನದ ರೋಟರ್‌ಗಳಲ್ಲಿ ಒಂದು ಮರಳು ದಂಡೆಯ ಮೇಲೆ ಬಿದ್ದಿರುವ ಚಿತ್ರಗಳನ್ನು ತೋರಿಸುತ್ತದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಹಡಗುಗಳು ಧಾವಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ತಿಳಿದುಬಂದಿದೆ. … Continue reading BREAKING NEWS: ಆಸ್ಟ್ರೇಲಿಯಾದಲ್ಲಿ ಹಾರಾಟದ ವೇಳೆ 2 ಹೆಲಿಕಾಪ್ಟರ್‌ಗಳ ಮಧ್ಯೆ ಡಿಕ್ಕಿ… ನಾಲ್ವರು ಸಾವು, ಮೂವರ ಸ್ಥಿತಿ ಚಿಂತಾಜನಕ