ಉತ್ತರಪ್ರದೇಶ : ಪ್ರಯಾಣಿಕನೊಬ್ಬ ಏರ್ ಇಂಡಿಯಾ ವಿಮಾನ ಲ್ಯಾಂಡ್ ಆದ ಕೂಡಲೇ ಹಠಾತ್ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಲಖನೌ ವಿಮಾನ ನಿಲ್ದಾಣದಲ್ಲಿ ಈ ಒಂದು ಘಟನೆ ಸಂಭವಿಸಿದೆ.
ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಹಠಾತ್ತನೆ ಸಾವನ್ನಪ್ಪಿದ್ದಾನೆ. ನವದೆಹಲಿಯಿಂದ ಲಖನೌಗೆ ಆಗಮಿಸಿದ್ದ ವಿಮಾನದಲ್ಲಿ ಪ್ರಯಾಣಿಕ ಆಸಿಫುಲ್ಲ ಅನ್ಸಾರಿ ಸಾವನಪ್ಪಿದ್ದಾರೆ. ವಿಮಾನ ಲ್ಯಾಂಡ್ ಆದ ಬಳಿಕ ಆಸಿಫುಲ್ಲ ಸಾವನಪ್ಪಿದ್ದಾರೆ. ಮಾರ್ಗ ಮಧ್ಯ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸೀಫುಲ್ಲಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಆಸಿಫುಲ್ಲ ಶವ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.