ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಭಂಧಿಸಿದಂತೆ ಈಗಾಗಲೇ ನಟಿ ರನ್ಯಾ ರಾವ್ ಅರೆಸ್ಟ್ ಆಗಿದ್ದಾರೆ.ಇದಿಗ ಬೆಂಗಳೂರಲ್ಲಿ ಮತ್ತೋರ್ವ ಮಹಿಳೆ ಆರೆಸ್ಟ್ ಆಗಿದ್ದು, ಆದರೆ ಈಕೆ ಚಿನ್ನದ ಕೇಸ್ ನಲ್ಲಿ ಆರೆಸ್ಟ್ ಆಗದೆ ಕೊಕೆನ್ ಸಾಗಾಟ ಮಾಡುತ್ತಿದ್ದಳು ಎಂದು ಈಗ ಡಿಆರ್‌ಐ ಅಧಿಕಾರಿಗಳು ಆರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಮಾರ್ಚ್ 18 ರಂದು ಕತಾರ್ ನಿಂದ ಬಂದಿದ್ದ ಮಹಿಳೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮಹಿಳೆ ಮಾದಕ ದ್ರವ್ಯ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಆರೋಪಿ ಮಹಿಳೆ ಘಾನಾ ದೇಶದ ಪ್ರಜೆಯಾಗಿದ್ದಾಳೆ ಎನ್ನಲಾಗಿದೆ. ಅನುಮಾನಗೊಂಡು ಅದಿಕಾರಿಗಳು ಮಹಿಳೆಯ ಬ್ಯಾಗ್ ಅನ್ನು ಪರೀಶೀಲನೆ ಮಡಿದ ವೇಳೆ 38.8 ಕೋಟಿ ಮೌಲ್ಯದ 3 ಕೆಜಿ ಕೋಕೆನ್ ಮಾದಕ ದ್ರವ್ಯವನ್ನು ಮರೆಮಾಚಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.ಬಳಿಕ ಆಕೆಯನ್ನು ಡಿಆರ್‌ಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.