ಬೆಂಗಳೂರು: ಕೆಎಂಎಫ್ ನಿಂದ ( KMF ) ನಂದಿನ ಹಾಲು, ಮೊಸರಿನ ದರವನ್ನು ( Nandini Milk Price Hike ) ಸಿಎಂ ಬೊಮ್ಮಾಯಿ ( CM Bommai ) ಜೊತೆಗಿನ ಸಭೆಯ ನಿರ್ದೇಶನದಂತೆ ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿತ್ತು. ಈ ಬೆನ್ನಲ್ಲೇ ಕೆಎಂಎಫ್ ನಂದಿನಿ ಸಿಹಿತಿನಿಸುಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಅಲ್ಲದೇ ತುಪ್ಪದ ದರಗಳು ಹೆಚ್ಚಳವಾಗಲಿವೆ ಎನ್ನಲಾಗುತ್ತಿದೆ.
BIGG NEWS: ಮಂಡ್ಯದಲ್ಲಿ ಕಮಲ ಅರಳಿಸಲು ಸಖತ್ ಪ್ಲ್ಯಾನ್ ; ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆ
ಕಳೆದ ಎರಡು ತಿಂಗಳಿನಿಂದ ನಾಲ್ಕು ಬಾರಿ ಹಂತ ಹಂತವಾಗಿ ತುಪ್ಪದ ದರವನ್ನು ಹೆಚ್ಚಳ ಮಾಡುತ್ತಾ ಕೆಎಂಎಫ್ ಬಂದಿದೆ. ಇದುವರೆಗೆ 170ರೂ ದರ ಹೆಚ್ಚಳ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ನಡುವೆಯೂ ಈಗ ನಂದಿನಿ ತುಪ್ಪದ ಜೊತೆಗೆ, ಸಿಹಿತಿನಿಸು ಸೇರಿದಂತೆ ಎಲ್ಲಾ ಉತ್ಪನ್ನಗಳ ದರವನ್ನು ಶೇ.5ರಿಂದ 15ರಷ್ಟು ಹೆಚ್ಚಳ ಮಾಡಲಾಗಿದೆ.
BIG BREAKING NEWS: ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ | Actor Vikram Gokhale No More
ಹೀಗಿದೆ ನಂದಿನಿ ಸಿಹಿತಿನಿಸುಗಳ ದರ ಹೆಚ್ಚಳ ವಿವರ
- 250 ಗ್ರಾಂ ಪೇಡ ರೂ.220 ರಿಂದ ರೂ.240ಕ್ಕೆ ಹೆಚ್ಚಳ ಮಾಡಲಾಗಿದೆ.
- ಬಾದಾಮ್ ಪೌಡರ್ ಕೆಜಿಗೆ ರೂ.400 ರಿಂದ ರೂ.440ಕ್ಕೆ ಹೆಚ್ಚಳ
- ಚಾಮೂನು ( ಅರ್ಧ ಕೆಜಿಗೆ) ರೂ.130 ರಿಂದ ರೂ.150ಕ್ಕೆ ಹೆಚ್ಚಳ
- 200 ಎಂ.ಎಲ್ ಪ್ಲೇವರ್ಡ್ ಮಿಲ್ಕ್ ರೂ.20ರಿಂದ 25ಕ್ಕೆ ಹೆಚ್ಚಳ
- 250 ಗ್ರಾಂ ರಸಗುಲ್ಲ ರೂ.130 ರಿಂದ ರೂ.150ಕ್ಕೆ ಹೆಚ್ಚಳ
- 250 ಗ್ರಾಂ ಬರ್ಫಿ ರೂ.195 ರಿಂದ 210ಕ್ಕೆ ಹೆಚ್ಚಳ
- 250 ಗ್ರಾಂ ಮೈಸೂರು ಪಾಕ್ ರೂ.135 ರಿಂದ 160ಕ್ಕೆ ಏರಿಕೆ
- 200 ಗ್ರಾಂ ಕೋವಾ ರೂ.60 ರಿಂದ 90ಕ್ಕೆ ಹೆಚ್ಚಳ.
ಈ ಕುರಿತು ಮಾತನಾಡಿರುವಂತ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಈ ಹಿಂದೆ ತುಪ್ಪದ ದರ ಹೆಚ್ಚಳ ಮಾಡಿದ್ದು ನಿಜ, ಇತರ ಉತ್ಪನ್ನಗಳ ದರವೂ ಜಾಸ್ತಿ ಮಾಡಲಾಗಿದೆ. ಮತ್ತೆ ತುಪ್ಪದ ದರ ಏರಿಕೆ ಮಾಡುವುದಿಲ್ಲ. ಹಾಲಿ ಇರುವ ದರವನ್ನೇ ಮುಂದುವರೆಸಲಾಗುವುದು ಎಂದು ಹೇಳಿದ್ದಾರೆ.
ಸರ್ ರೈತರ ಸಾಲಮನ್ನಾ ಮಾಡುವಿರಾ.? ಏಯ್ ನೆಕ್ಸ್ಟ್ ಪ್ರಶ್ನೆ ಕೇಳಪ್ಪ: ಸಿಎಂ ಬೊಮ್ಮಾಯಿ ಉತ್ತರ
ಕೆಎಂಎಫ್ ಅಧ್ಯಕ್ಷರು ಹೀಗೆ ಹೇಳಿದ್ರೇ, ತುಪ್ಪದ ಬೆಲೆ ಮಾತ್ರ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ ಎಂಬುದಾಗಿ ಕೆಎಂಎಫ್ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮೂಲಕ ನಂದಿನಿ ಹಾಲು, ಮೊಸರಿನ ದರದ ಬೆನ್ನಲ್ಲೇ ಸಿಹಿತಿನಿಸುಗಳ ದರ ಹೆಚ್ಚಳವಾದರೇ, ತುಪ್ಪದ ದರವು ಹೆಚ್ಚಳವಾಗುವ ಸಾಧ್ಯತೆ ಇದೆ.