ಬೆಂಗಳೂರು: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ ನೀಡಿದಂತ ಸಂದರ್ಭದಲ್ಲಿ ಬೆಂಗಳೂರಿನ ಅನೇಕ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿದ್ದರು. ಅಲ್ಲದೇ ಡಾಂಭಾರೀಕರಣ ಕೂಡ ಮಾಡಿದ್ದರು. ಆದ್ರೇ ಅವರು ಹೋದ ನಂತ್ರ ರಸ್ತೆ ಕಿತ್ತೋಗಿತ್ತು. ಈಗಲೂ ಅಷ್ಟೇ ತರಾತುರಿಯಲ್ಲಿ ರಸ್ತೆ ಮಾಡುತ್ತಿದ್ದಾರೆ, ಗುಂಡಿ ಮುಚ್ಚುತ್ತಿದ್ದಾರೆ, ಮೋದಿ ಬಂದು ಹೋದ ಮೇಲೆ ರಸ್ತೆ ಕಿತ್ತೋಗಲಿದೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.
BREAKING NEWS : ‘ಮುರುಘಾ ಶ್ರೀ’ ಪೋಕ್ಸೋ ಕೇಸ್ : ಒಡನಾಡಿ ಸಂಸ್ಥೆಯ ನಾಲ್ವರು ಸಿಬ್ಬಂದಿ ಪೊಲೀಸ್ ವಶಕ್ಕೆ , ವಿಚಾರಣೆ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆಂಗಳೂರಿನಲ್ಲಿನ ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. ತರಾತುರಿಯಲ್ಲಿ ಪ್ರಧಾನಿ ಮೋದಿ ಬರ್ತಾ ಇದ್ದಾರೆ ಅಂತ ಈಗ ಗುಂಡಿ ಮುಚ್ಚುತ್ತಾ ಇದ್ದಾರೆ. ರಸ್ತೆಗಳಿಗೆ ಡಾಂಬಾರೀಕರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕೋರ್ಟ್ ಛೀಮಾರಿ ಹಾಕಿದ ಮೇಲೆ ಗುಂಡಿ ಮುಚ್ಚೋ ಕೆಲಸ ಮಾಡಿದ್ದಂತ ಬಿಜೆಪಿ ಸರ್ಕಾರ, ಈಗ ಮೋದಿ ಕಾರ್ಯಕ್ರಮಕ್ಕೆ ಢಾಂಬಾರೀಕರಣ, ರಸ್ತೆ ಗುಂಡಿ ಮುಚ್ಚೋ ಕೆಲಸ ಮಾಡುತ್ತಿದೆ. ಆದ್ರೇ ತರಾತುರಿಯಲ್ಲಿ ಮಾಡುತ್ತಿರುವಂತ ಡಾಂಭಾರೀಕರಣ, ಗುಂಡಿ ಮುಚ್ಚೋ ಕೆಲಸವು ಕಳಪೆ ಗುಣಮಟ್ಟದ್ದಾಗಿದ್ದರಿಂದ, ಮೋದಿ ಹೋದ ಮೇಲೆ ಕಿತ್ತು ಹೋಗಲಿದೆ ಎಂಬುದಾಗಿ ವ್ಯಂಗ್ಯವಾಡಿದರು.