ಬೆಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ದಿನಗಳ ಕಾಲ ಜೈಲುವಾಸ ಅನುಭವಿಸಿ ನಿನ್ನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೇಲಿನಿಂದ ಬಿಡುಗಡೆಯಾದ ಹೆಚ್ ಡಿ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ. ಕಿಡ್ನ್ಯಾಪ್ ಕೆಎಸ್ ಅಲ್ಲಿ ಎಚ್ ಡಿ ರೇವಣ್ಣಗೆ ಜಾಮೀನು ದೊರಕಿದ್ದು ಇದಿರ ಎಸ್ಐಟಿ ಜಾಮೀನು ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದೆ ಎಂದು ಬಲಮೂಲಗಳಿಂದ ತಿಳಿದು ಬಂದಿದೆ.
ತಮ್ಮ ಪುತ್ರ ಹಾಗೂ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಲೈಂಗಿಕ ಹಗರಣದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ಆರೋಪಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಜಾಮೀನು ರದ್ದು ಕೋರಿ ಬುಧವಾರ ಅಥವಾ ಗುರುವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ವಿಶೇಷ ತನಿಖಾ ದಳ ಮುಂದಾಗಿದೆ ಎಂದು ತಿಳಿದು ಬಂದಿದೆ.
ತನ್ಮೂಲಕ ಜೈಲಿನಿಂದ ಹೊರಬಂದ ಕೂಡಲೇ ದೇವರ ದರ್ಶನಕ್ಕೆ ಯಾತ್ರೆ ನಡೆಸಿದ್ದ ರೇವಣ್ಣ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಲ್ಲದೆ ಎಸ್‌ಐಟಿ ಈ ನಿರ್ಧಾರಕ್ಕೆ ರಾಜ್ಯ ಸರ್ಕಾರ ಕೂಡ ಹಸಿರು ನಿಶಾನೆ ತೋರಿಸಿದೆ ಎನ್ನಲಾಗುತ್ತಿದೆ. ರೇವಣ್ಣಗೆ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ನೀಡಿತು. ಈ ಜಾಮೀನು ಪಡೆದ ಬೆನ್ನಲ್ಲೇ ಮಂಗಳವಾರ ಮಾಜಿ ಸಚಿವರು ಜೈಲಿನಿಂದ ಬಂಧಮುಕ್ತರಾಗಿದ್ದರು.