ಹುಬ್ಬಳ್ಳಿ: ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಕೂಗು ಎದ್ದಿತ್ತು. ಈ ಬಳಿಕ ಸಮ್ಮಿಶ್ರ ಸರ್ಕಾರದ ವೇಳೆಯಲ್ಲಿಯೂ ಇದು ವ್ಯಾಪಕವಾಗಿ ಕೇಳಿ ಬಂದಿತ್ತು. ಇದೀಗ ಈ ಬಳಿಕ ಮಹಿಳಾ ಮುಖ್ಯಮಂತ್ರಿ ಕೂಗು ಎದ್ದಿದೆ.
ಈ ಬಗ್ಗೆ ಸ್ವತಹ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ವಿಷಯವನ್ನು ಎತ್ತಿದ್ದಾರೆ. ಮಹಿಳಾ ಮುಖ್ಯಮಂತ್ರಿ ಬರಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಅದಕ್ಕೆ ತಕ್ಕ ವಾತಾವರಣ ನಿರ್ಮಾಣವಾಗಬೇಕಿದೆ. ನಾವು ಅರ್ಧದಷ್ಟು ಜನಸಂಖ್ಯೆ ಇದ್ದೇವೆ. ಯಾಕೆ ಕೊಡಬಾರದು ಎಂದು ಪ್ರಶ್ನಿಸಿದರು.
ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ.. ʻವೀರ್ಯಾಣು ಸಂಖ್ಯೆ ಕಡಿಮೆʼಯಾಗುತ್ತದೆ : ಸಂಶೋಧನೆಯಲ್ಲಿ ಬಹಿರಂಗ
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಇದೆ. ಕಾಂಗ್ರೆಸ್ ನಿಂದ ಮಾತ್ರ ದಲಿತ ಸಿಎಂ ಸಾಧ್ಯ. ಬಿಜೆಪಿ ದಲಿತರನ್ನು ಒಡೆದು ಆಳುವ ನೀತಿ ಅನುರಸಿರುತ್ತಿದೆ. ಅಂಬೇಡ್ಕರ್ ಬಗ್ಗೆ ಮಾತನಾಡುವುದಕ್ಕೆ ಯೋಗ್ಯತೆ ಇರಲಿಲ್ಲ ಎಂದು ಕಿಡಿಕಾರಿದರು.