ಗುಜರಾತ್ : ಸತತ ಮೂರನೇ ಬಾರಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ತನ್ನ ಕಾರ್ಯಾಚರಣೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ವಾರಣಾಸಿಗೆ ತೆರಳುತ್ತಿದ್ದ ರೈಲಿನ ಒಂದು ರೇಕ್ನಲ್ಲಿ ಚಕ್ರವು ಜಾಮ್ ಆಗಿ ಸಂಚಾರ ಸ್ಥಗಿತಗೊಂಡಿದ್ದು, ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.
ರೈಲು ದಂಕೌರ್ ಮತ್ತು ವೈರ್ ನಿಲ್ದಾಣಗಳ ನಡುವೆ C8 ಕೋಚ್ನ ಟ್ರಾಕ್ಷನ್ ಮೋಟಾರ್ನಲ್ಲಿ ಬೇರಿಂಗ್ ದೋಷ ಕಂಡು ಬಂದಿತು.
ವಾರಣಾಸಿ ವಂದೇ ಭಾರತ್ ರೇಕ್ (ರೈಲು ಸಂಖ್ಯೆ. 22436) ಉತ್ತರ ಮಧ್ಯ ರೈಲ್ವೆಯ ದಂಕೌರ್ ಮತ್ತು ವೈರ್ ನಿಲ್ದಾಣಗಳ ನಡುವಿನ C8 ಕೋಚ್ನ ಟ್ರಾಕ್ಷನ್ ಮೋಟರ್ನಲ್ಲಿ ಬೇರಿಂಗ್ ದೋಷದಿಂದಾಗಿ ವಿಫಲವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Varanasi Vande Bharat rake has suffered a failure due to a bearing defect in the Traction Motor of C8 coach between the Dankaur and Wair stations of North Central Railway. The bearing jam was rectified with the assistance of NCR team: Indian Railways pic.twitter.com/STOUgAYbET
— ANI (@ANI) October 8, 2022
ವರದಿಯ ಪ್ರಕಾರ, ಸಿಬ್ಬಂದಿ ದೋಷವನ್ನು ಪತ್ತೆಹಚ್ಚಿದರು. ಬಳಿಕ ದೆಹಲಿಯಿಂದ ವಾರಣಾಸಿಗೆ ಹೋಗುತ್ತಿದ್ದ ರೈಲನ್ನು ನಿಲ್ಲಿಸಲು ರೈಲ್ವೆ ಕಾರ್ಯಾಚರಣೆ ನಿಯಂತ್ರಣಕ್ಕೆ ಎಚ್ಚರಿಕೆ ನೀಡಿದರು.
ನಂತರ, ಆನ್ಬೋರ್ಡ್ ತಾಂತ್ರಿಕ ಸಿಬ್ಬಂದಿ ತಪಾಸಣೆಯ ನಂತರ, ಎಕ್ಸ್ಪ್ರೆಸ್ ಅನ್ನು ನಿಯಂತ್ರಿತ ವೇಗದಲ್ಲಿ 20 ಕಿಮೀ ಮುಂದೆ ಖುರ್ಜಾ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಯಿತು.ನಂತರ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣಿಕರನ್ನು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್ಪ್ರೆಸ್ಗೆ ಸ್ಥಳಾಂತರಿಸಲಾಯಿತು.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಮಾನ ಅವಕಾಶಗಳು ಅಗತ್ಯ – ಸಿಎಂ ಬಸವರಾಜ ಬೊಮ್ಮಾಯಿ