ಬೀಜಿಂಗ್: ಚೀನಾದಲ್ಲಿ ನಗರ ಪ್ರದೇಶಗಳ ನಂತ್ರ, ಗ್ರಾಮೀಣ ಭಾಗಕ್ಕೂ ( rural China ) ಕೊರೋನಾ ಲಗ್ಗೆ ಇಟ್ಟಿದೆ. ಚೀನಾದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ 500 ದಶಲಕ್ಷಕ್ಕೂ ಹೆಚ್ಚು ಜನರು ಮುಂಬರುವ ದಿನಗಳಲ್ಲಿ ಕೋವಿಡ್ -19 ಸೋಂಕಿನ ( Covid19 Case ) ಅಲೆಯನ್ನು ಎದುರಿಸಬಹುದು. ಏಕೆಂದರೆ ಜನವರಿಯಲ್ಲಿ ಚಂದ್ರನ ಹೊಸ ವರ್ಷದ (ಎಲ್ಎನ್ವೈ) ರಜಾದಿನಗಳಿಗಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳುತ್ತಾರೆ ಎಂಬುದಾಗಿ ಹೇಳಲಾಗುತ್ತಿದೆ.
ಈಗಾಗಲೇ ಚೀನಾದ ನಗರ ಪ್ರದೇಶಗಳಲ್ಲಿ ಕೋವಿಡ್ ಆರ್ಭಟ ಹೆಚ್ಚಾಗಿದೆ. ಈ ಬಳಿಕ ಗ್ರಾಮೀಣ ಭಾಗಕ್ಕೂ ಚೀನಾದಲ್ಲಿ ಹೊಸ ವರ್ಷದ ಬಳಿಕ ಕೋವಿಡ್ ವ್ಯಾಪಕವಾಗಿ ಹರಡಲಿದೆ ಎನ್ನಲಾಗುತ್ತಿದೆ.
ಚೀನಾದ ಹಳ್ಳಿಗಳಲ್ಲಿಯೂ ಓಮಿಕ್ರಾನ್ ರೂಪಾಂತರದ ಉಪತಳಿಯ ಕೊರೋನಾ ಸೋಂಕು ನಿಧಾನವಾಗಿ ಹರೋಡಕ್ಕೆ ಶುರುಮಾಡಿದೆ ಎಂದು ತಿಳಿದು ಬಂದಿದೆ. ಚೀನಾದಲ್ಲಿನ ಅನೇಕ ಗ್ರಾಮೀಣ ಚಿಕಿತ್ಸಾಲಯಗಳಲ್ಲಿ ಜ್ವರದಿಂದ ಬಳಲುತ್ತಿರೋ ರೋಗಿಗಳ ಸಂಖ್ಯೆ ತುಂಬಿ ತುಳುಕುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಅಲ್ಲದೇ ಕೋವಿಡ್ ಸೋಂಕು ಕೂಡ ದೃಢಪಟ್ಟಿರೋದಾಗಿ ಹೇಳಲಾಗುತ್ತಿದೆ.
ಇನ್ನೂ ವೈದ್ಯಕೀಯ ವ್ಯವಸ್ಥೆ ತುಲನಾತ್ಮಕವಾಗಿ ದುರ್ಬಲವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳ ಉಲ್ಬಣಗಳು ಪ್ರಾರಂಭಿಸಿವೆ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ (ಜಿಟಿ) ಟ್ಯಾಬ್ಲಾಯ್ಡ್ ಈ ವಾರ ವರದಿ ಮಾಡಿದೆ. ಔಷಧಿಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆಯು ಅವರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ ಎಂದು ಜಿಟಿ ವರದಿ ಮಾಡಿದೆ.
ಕಾರಡಗಿಯಲ್ಲಿ 8 ಕೋಟಿ ರೂ. ವೆಚ್ಚದ 30 ಹಾಸಿಗೆ ಆಸ್ಪತ್ರೆ ನಿರ್ಮಾಣ – ಸಿಎಂ ಬಸವರಾಜ ಬೊಮ್ಮಾಯಿ
ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಸೂಪರ್ ಸ್ಟಾರ್ ಕಮಲ್ ಹಾಸನ್ | Bharat Jodo Yatra